ಬಾಕ್ಸ್ ಆಫೀಸ್ ನಲ್ಲಿ ಸೈಲೆಂಟ್ ಆದ ‘ಕಂಗುವ’: ವಿಮರ್ಶಕರಿಗೆ ನಿಷೇಧ ಹೇರಿದ ತಮಿಳುನಾಡು ನಿರ್ಮಾಪಕರ ಸಂಘ

0
Spread the love

ಸೋಷಿಯಲ್ ಮೀಡಿಯಾ ಯುಗದಲ್ಲಿ ಪ್ರತಿಯೊಂದು ಕೂಡ ಜನರಿಗೆ ತಲುಪುತ್ತಿದೆ. ಈ ಹಿಂದೆ ಸಿನಿಮಾ ಹೇಗಿದೆ ಎಂಬುದನ್ನು ತಿಳಿಯಲು ಥಿಯೇಟರ್ ಗೆ ಹೋಗಬೇಕಿತ್ತು. ಆದರೆ ಇದೀಗ ಕೆಲವರು ಸಿನಿಮಾ ನೋಡಿ ಬಂದು ಸೋಷಿಯಲ್ ಮೀಡಿಯಾದಲ್ಲಿ ಆ ಸಿನಿಮಾದ ವಿಮರ್ಶೆ ಮಾಡುತ್ತಾರೆ. ಈ ವಿಮರ್ಶೆಗಳನ್ನು ನೋಡಿ ಸಾಕಷ್ಟು ಜನ ಥಿಯೇಟರ್ ಗೆ ಹೋಗ್ತಿದ್ದಾರೆ. ಆದರಂತೆ ಇತ್ತೀಚೆಗೆ ರಿಲೀಸ್ ಆದ ‘ಕಂಗುವ’ ಹಾಗೂ ‘ವೆಟ್ಟೈಯಾನ್’ ಸಿನಿಮಾಗಳಿಗೆ ಕೆಟ್ಟ ವಿಮರ್ಶೆ ಸಿಕ್ಕಿದ್ದ ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ನೆಲಕಚ್ಚಿತ್ತು. ಇದನ್ನು ಗಮನದಲ್ಲಿ ಇಟ್ಟುಕೊಂಡು ತಮಿಳುನಾಡು ನಿರ್ಮಾಪಕರ ಸಂಘ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ.

Advertisement

ವಿಮರ್ಶೆ ಎಂದರೆ ಸಿನಿಮಾ ಬಗ್ಗೆ ಸಂಪೂರ್ಣ ವಿವರ ಇರಬೇಕು. ಆದರೆ, ಇಲ್ಲಿ ಆ ರೀತಿ ಆಗುವುದಿಲ್ಲ. ಸಿನಿಮಾ ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂದಷ್ಟೇ ಹೇಳಲಾಗುತ್ತದೆ. ಈ ರೀತಿಯ ವಿಮರ್ಶೆಗಳಿಂದಲೇ ‘ಕಂಗುವ’ ಹಾಗೂ ‘ವೆಟ್ಟೈಯಾನ್’ ಸಿನಿಮಾ ಹಿನ್ನಡೆ ಅನುಭವಿಸಿತು ಎಂದು ಕೆಲವರು ಅಭಿಪ್ರಾಯ ಹೊರಹಾಕಿದ್ದಾರೆ. ಈ ಕಾರಣಕ್ಕೆ ತಮಿಳು ನಿರ್ಮಾಪಕರ ಸಂಘದವರು ಥಿಯೇಟರ್​ ಮುಂಭಾಗದಲ್ಲಿ ಸಿನಿಮಾ ವಿಮರ್ಶೆ ಮಾಡೋದನ್ನು ಬ್ಯಾನ್ ಮಾಡಿದ್ದಾರೆ. ಇದರ ಪ್ರಕಾರ ಯಾರೂ ಥಿಯೇಟರ್ ಬಳಿ ಮೈಕ್ ಹಿಡಿದು ಬರುವಂತಿಲ್ಲ.

‘ಈ ರೀತಿಯ ವಿಮರ್ಶೆಗಳು ಸಿನಿಮಾಗೆ ತೊಂದರೆ ಮಾಡುತ್ತವೆ. ಈ ಕಾರಣಕ್ಕೆ ಬ್ಯಾನ್ ಮಾಡಲಾಗಿದೆ’ ಎನ್ನುವ ಅಭಿಪ್ರಾಯವನ್ನು ನಿರ್ಮಾಪಕರ ಕೌನ್ಸಿಲ್ ನೀಡಿದೆ. ಇದಕ್ಕೆ ಯೂಟ್ಯೂಬರ್​ಗಳು ವಿರೋಧ ವ್ಯಕ್ತಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here