ಹೆಣ್ಣು ಕೊಟ್ಟ ಅತ್ತೆ ಮನೆಗೆ ‘ಕನ್ನ’: ಖತರ್ನಾಕ್ ಅಳಿಯ ಅರೆಸ್ಟ್, 9.30 ಲಕ್ಷ ನಗದು ಜಪ್ತಿ!

0
Spread the love

ಕಲಬುರಗಿ:- ಹೆಣ್ಣು ಕೊಟ್ಟ ಅತ್ತೆ ಮನೆಯಲ್ಲೇ ಅಳಿಯನೋರ್ವ ಕನ್ನ ಹಾಕಿರುವ ಘಟನೆ ಕಲಬುರಗಿ ಜಿಲ್ಲೆಯ ಕಾಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

Advertisement

ಘಟನೆಗೆ ಸಂಬಂಧಿಸಿದಂತೆ ಇಲ್ಲಿನ ಕಾಳಗಿ ಪೊಲೀಸರು ಆರೋಪಿ ಅಳಿಯನನ್ನು ಅರೆಸ್ಟ್ ಮಾಡಿದ್ದಾರೆ. ಮೀನಪ್ಪ ಬಂಧಿತ ಖತರ್ನಾಕ್ ಅಳಿಯ. ಈತ ತನ್ನ ಅತ್ತೆ ಸಿದ್ದಮ್ಮ ಹೊಲ ಖರೀದಿಸಲೆಂದು ಕೂಡಿಟ್ಟಿದ್ದ ಸುಮಾರು 11 ಲಕ್ಷ ಕದ್ದು ಎಸ್ಕೇಪ್ ಆಗಿದ್ದ. ಸಿದ್ದಮ್ಮ ಮನೆಯಲ್ಲಿ ಇಲ್ಲದ ವೇಳೆ ಈ ಕೃತ್ಯ ಎಸಗಿದ್ದ. ಅಲ್ಲದೇ ತಮ್ಮ ಅನಿಲ್ ಎಂಬುವವನಿಗೆ ಕದ್ದ ಹಣದಲ್ಲಿ 1 ಲಕ್ಷ 70 ಸಾವಿರ ಕೊಟ್ಟಿದ್ದ.

ಈ ಸಂಬಂಧ ಸಂತ್ರಸ್ತ ಮಹಿಳೆ ಕಾಳಗಿ ಪೋಲಿಸ್ ಠಾಣೆಗೆ ದೂರು ಕೊಟ್ಟಿದ್ದರು. ದೂರಿನ ಅನ್ವಯ ತನಿಖೆ ಕೈಗೊಂಡ ಪೊಲೀಸರು, ಇದೀಗ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತನಿಂದ 9 ಲಕ್ಷ 30 ಸಾವಿರ ಜಪ್ತಿ ಮಾಡಿದ್ದಾರೆ.

ಕಾಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.


Spread the love

LEAVE A REPLY

Please enter your comment!
Please enter your name here