ಬೆಂಗಳೂರು: ಅನ್ನದಾತನಿಗೆ ಕನ್ನ ಹಾಕೋ ಕೆಲಸ ಜಮೀರ್ ಮತ್ತು ಸಿದ್ದರಾಮಯ್ಯ ಟೀಂ ಮಾಡಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರೈತರ ಜಮೀನು ವಕ್ಫ್ ಬೋರ್ಡ್ ಲೂಟಿ ಮಾಡಲು ಹೊರಟಿದೆ. ಅದರಿಂದ ಮುಕ್ತಿ ಸಿಗೋ ಯೋಗ ರೈತರಿಗೆ ಬರಲಿ. ವಿಜಯಪುರ ಡಿಸಿ ಕಚೇರಿ ಮುಂದೆ ರೈತರು ಪ್ರತಿಭಟನೆ ಮಾಡ್ತಿದ್ದಾರೆ. ನಮ್ಮ ಪಕ್ಷ ರೈತರ ಪರ ಇರಲಿದೆ. ಅವರ ಪ್ರತಿಭಟನೆಗೆ ಬೆಂಬಲ ಇದೆ.
ಅನ್ನದಾತನಿಗೆ ಕನ್ನ ಹಾಕೋ ಕೆಲಸ ಜಮೀರ್ ಮತ್ತು ಸಿದ್ದರಾಮಯ್ಯ ಟೀಂ ಮಾಡಿದೆ. ಕಾಂಗ್ರೆಸ್ ಅವರಿಗೆ ಮುಸ್ಲಿಂ ಭೂತ ಹಿಡಿದಿದೆ. ದೆವ್ವ ಬಿಡಿಸೋಕೆ ಹುಣಸೆ ಬರಲು ತಗೊಂಡು ಬಡಿಯೋ ವರೆಗೂ ಅವರಿಗೆ ದೆವ್ವ ಬಿಡೋದಿಲ್ಲ. ಕೋಲಾರ, ಚನ್ನಪಟ್ಟಣ, ಹುಬ್ಬಳ್ಳಿ, ಬೆಳಗಾವಿ ಎಲ್ಲಾ ಕಡೆ ನೋಟಿಸ್ ಹೋಗಿದೆ. ನುಸುಳುಕೋರರ ರೀತಿ ವಕ್ಫ್ ಬೋರ್ಡ್ ದಾಖಲೆ ತಿದ್ದುವ ಕೆಲಸ ಮಾಡ್ತಿದೆ. ಹೀಗಾಗಿ, ಇಡೀ ರಾಜ್ಯಾದ್ಯಂತ ನವೆಂಬರ್ 4 ರಂದು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.