ಲಕ್ಷ್ಮೇಶ್ವರ ಪಟ್ಟಣಕ್ಕೆ ಕನ್ನಡ ರಥ

0
Kannada chariot to Lakshmeshwar town
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಮಂಡ್ಯದಲ್ಲಿ ಡಿಸೆಂಬರ್‌ನಲ್ಲಿ ಜರುಗಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥವು, ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣಕ್ಕೆ ಶನಿವಾರ ಆಗಮಿಸಿತು.

Advertisement

ಪಟ್ಟಣದ ಪಂಪ ವೃತ್ತಕ್ಕೆ ಆಗಮಿಸುತ್ತಿದ್ದಂತೆ ತಾಲೂಕಾಡಳಿತ ಲಕ್ಷ್ಮೇಶ್ವರ, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು, ವಿವಿಧ ಕನ್ನಡಪರ ಸಂಘಟನೆ ಹಾಗೂ ಸಮಸ್ತ ಪಟ್ಟಣದ ಜನತೆ ಬರಮಾಡಿಕೊಂಡು ತಾಯಿ ಭುವನೇಶ್ವರಿ ಮೂರ್ತಿಗೆ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶಾಸಕ ಚಂದ್ರು ಲಮಾಣಿ ಹಾಗೂ ಮಾಜಿ ಶಾಸಕ ಜಿ.ಎಮ್. ಮಹಾಂತಶೆಟ್ಟರ ಮಾತನಾಡಿ, ಕನ್ನಡ ಭಾಷೆ ಬೆಳೆಸುವಲ್ಲಿ ಪ್ರತಿಯೊಬ್ಬರೂ ಕಂಕಣ ಬದ್ಧರಾಗಿ ನಿಲ್ಲಬೇಕು. ಕನ್ನಡ ನಾಡು ಉಳಿಸಿ-ಬೆಳೆಸುವ ಇಂತಹ ಕಾರ್ಯಕ್ರಮವು ಎಲ್ಲರಲ್ಲೂ ಸಂತೋಷ ಉಂಟು ಮಾಡಿದೆ. ಪ್ರತಿಯೊಬ್ಬರಲ್ಲಿ ನಾನೊಬ್ಬ ಕನ್ನಡಿಗ ಎಂಬ ಅಭಿಮಾನವಿರಬೇಕು. ಕನ್ನಡ ಹೋರಾಟಗಾರರನ್ನು ನೆನೆಯುವ ಮೂಲಕ ಅವರ ಆದರ್ಶ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ತಹಸೀಲ್ದಾರ ವಾಸುದೇವ ವಿ.ಸ್ವಾಮಿ, ಕಸಾಪ ತಾಲೂಕಾ ಅಧ್ಯಕ್ಷ ಈಶ್ವರ ಮೆಡ್ಲೇರಿ ಮಾತನಾಡಿದರು. ಮಂಡ್ಯ ಜಿಲ್ಲೆಯ ವಿಶೇಷತೆ ಸಾರುವ ರಥವು, ಕನ್ನಡ ನುಡಿ ಕಲಿಸುವ ತಾಯಿ ಭುವನೇಶ್ವರಿ, ಕಾವೇರಿ ಮಾತೆ, ಉಳುಮೆ ಮಾಡಲು ಸಿದ್ಧವಿರುವ ಎತ್ತುಗಳು ಮತ್ತು ರೈತ, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಅವರ ಸುಂದರ ಆಕೃತಿಗಳು ಜಿಲ್ಲೆಯ ಬಗ್ಗೆ ಚಿತ್ರಣ, ಜ್ಞಾನಪೀಠ ಪುರಸ್ಕೃತರ ಬಾವಚಿತ್ರಗಳನ್ನು ಒಳಗೊಂಡಿರುವುದು ವಿಶೇಷ ಆಕರ್ಷಣೆಯಾಗಿದೆ.

ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ, ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಉಪಾಧ್ಯಕ್ಷ ಫಿರ್ದೋಷ ಆಡೂರ, ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ, ಸಿಡಿಪಿಓ ಮೃತ್ಯುಂಜಯ ಗುಡ್ಡದಅನ್ವೇರಿ, ಡಾ. ಪರಶುರಾಮ ಬಾರ್ಕಿ, ಬಸವರಾಜ ಬೆಂಡಿಗೇರಿ, ಮಂಜುನಾಥ ಚಾಕಲಬ್ಬಿ, ಎಸ್.ಬಿ. ಅಣ್ಣಿಗೇರಿ, ಪಿ.ಬಿ. ಕರಾಟೆ, ಸಿ.ಜಿ. ಹಿರೇಮಠ, ಶರಣು ಗೋಡಿ, ಮಹೇಶ ಕಲಘಟಗಿ, ಬಸವರಾಜ ಬಾಳೆಶ್ವರಮಠ ನೀಲಪ್ಪ ಹತ್ತಿ, ಅಗಡಿ ಇಂಜಿನಿಯರಿAಗ್ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಪಟ್ಟಣದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ಮಹಿಳಾ ಸಂಘಟನೆಗಳ ಕಾರ್ಯಕರ್ತರು, ಕನ್ನಡಾಭಿಮಾನಿಗಳು ಇದ್ದರು.

ಜ್ಯೋತಿ ಕನ್ನಡ ರಥಯಾತ್ರೆ ಮೆರವಣಿಗೆ ಲಕ್ಷ್ಮೇಶ್ವರದ ಪಂಪ ವೃತ್ತದಿಂದ ಹಳೇ ಬಸ್ ಸ್ಟಾಂಡ್ ಕ್ರಾಸ್, ಮಾನ್ವಿ ಪೆಟ್ರೋಲ್ ಬಂಕ್, ಶಿಗ್ಲಿ ಕ್ರಾಸ್, ಹೊಸ ಬಸ್ ಸ್ಟಾಂಡ್ ಮುಂದೆ ಹಾಯ್ದು ಗದುಗಿನ ಅಗಸಿವರೆಗೂ ಸಾಗಿ ನಂತರ ಶಿರಹಟ್ಟಿ ತಾಲೂಕಿನ ಕಡೆ ಸಾಗಿತು. ಇದೇ ವೇಳೆ ಶಾಲಾ ವಿದ್ಯಾರ್ಥಿಗಳು ಅನೇಕ ಮಹನೀಯರ, ಹೋರಾಟಗಾರರ ವೇಷದಲ್ಲಿ ಗಮನ ಸೆಳೆದರು.


Spread the love

LEAVE A REPLY

Please enter your comment!
Please enter your name here