ಬೆಂಗಳೂರು: ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂಬ ಕಮಲ್ ಹಾಸನ್ ಹೇಳಿಕೆಗೆ ಕನ್ನಡಿಗರು ವ್ಯಾಪಾಕ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕಮಲ್ ಹಾಸನ್ ವಿರುದ್ಧ ಪ್ರತಿಭಟನೆಗಳು ಕೂಡ ನಡೆಯುತ್ತಿದೆ.ಇದೇ ವಿಚಾರಕ್ಕೆ ಕ್ಷಮೆ ಸಂಬಂಧಿಸಿದಂತೆ ಇಂದು ಕರ್ನಾಟಕ ಫಿಲ್ಮ್ ಚೇಂಬರ್ನಲ್ಲಿ ಸಭೆ ನಡೆಸಲಾಯಿತು.
ಈ ವೇಳೆ ಎಲ್ಲರ ಅಭಿಪ್ರಾಯ ಕೇಳಲಾಗಿದೆ. ಅಲ್ಲದೆ, ‘ಥಗ್ ಲೈಫ್’ ಚಿತ್ರದ ಕರ್ನಾಟಕದ ವಿತರಕ ವೆಂಕಟೇಶ್ ಅವರ ಕೋರಿಕೆ ಮೇರೆಗೆ ಕಮಲ್ಗೆ ಮತ್ತೆ 24 ಗಂಟೆ ಟೈಮ್ ಕೊಟ್ಟಿದೆ. ಈ ಬಗ್ಗೆ ಕಮಲ್ ಹಾಸನ್ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಕಮಲ್ ಹಾಸನ್ ಅವರು ಕನ್ನಡದ ವಿಚಾರಕ್ಕೆ ಕ್ಷಮೆ ಕೇಳಿಲ್ಲ. ಈಗ ಅವರಿಗೆ ಮತ್ತೆ 24 ಗಂಟೆ ಟೈಮ್ ಕೊಡಲಾಗಿದೆ. ಈ ಬಗ್ಗೆ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಮಾಹಿತಿ ನೀಡಿದ್ದಾರೆ. ‘ಕಮಲ್ ಹಾಸನ್ ಕ್ಷಮೆ ಕೆಳೋ ಚಾನ್ಸೇ ಇಲ್ಲ ಎಂದು ಅನಿಸುತ್ತಿದೆ. ಎಲ್ಲರ ಜೊತೆ ಚರ್ಚೆ ಮಾಡುತ್ತೇವೆ.
ಎಲ್ಲರ ಅನಿಸಿಕೆ ಏನಿದೆ ಎಂಬುದನ್ನು ನೋಡುತ್ತೇವೆ. ಕಮಲ್ ಹಾಸನ್ ಸದ್ಯ ದುಬೈನಲ್ಲಿದ್ದಾರೆ. ನಾಳೆ 11 ಘಂಟೆಗೆ ಚೆನ್ನೈಗೆ ಬರ್ತಾರೆ. ಮಂಗಳವಾರ ಮಧ್ಯಾಹ್ನ 12 ಗಂಟೆ ತನಕ ಟೈಂ ಕೊಡಿ ಅಂತ ವಿತರಕರು ಕೆಳಿದ್ದಾರೆ’ ಎಂದಿದ್ದಾರೆ ನರಸಿಂಹಲು. ಈ ಮೂಲಕ ನಾಳೆವರೆಗೆ ಕಮಲ್ ಹಾಸನ್ಗೆ ಗಡುವು ಕೊಟ್ಟಂತೆ ಆಗಿದೆ.