ಗದಗ: ಸಿಎಂ ಸಿದ್ದರಾಮಯ್ಯಗೆ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರ ಅನುಮತಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ವಿರುದ್ದ ಸಚಿವ ಎಚ್ ಕೆ ಪಾಟೀಲ್ ಗರಂ ಆಗಿದ್ದಾರೆ.
ರಾಜ್ಯಪಾಲರ ನಡೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾಡನಾಡಿದ ಅವರು, ಸಂವಿಧಾನ ಬಾಹಿರ, ಅವೈಜ್ಞಾನಿಕ, ಅಸಮಂಜಸವಾದ ಅನುಮತಿ ನೀಡಿದ್ದಾರೆ. ಆದ್ದರಿಂದ ರಾಜ್ಯಪಾಲರ ಅನ್ಯಾಯದ ನಡೆಯ ವಿರುದ್ದ ಈ ಪ್ರತಿಭಟನೆ ಮಾಡಲಾಗುತ್ತಿದೆ.
ಕೇಂದ್ರ ಸರ್ಕಾರದ ನಿಯಮಾವಳಿ SOP ಗಾಳಿಗೆ ತೂರಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಕೊಡುವಂತಹ ಕೆಲಸ ಮಾಡಿದ್ದು ಅತ್ಯಂತ ಖಂಡನೀಯವಾಗಿದ್ದು, ಕರ್ನಾಟಕ ಸರ್ಕಾರವನ್ನ ಅಭದ್ರಗೊಳಿಸುವ ನಿಮ್ಮ ಪ್ರಯತ್ನ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ದೋಖಾ ತರುವಂತಹದು ಆಗಿದೆ. ನಿಮ್ಮ ನಡೆಯನ್ನು ಕನ್ನಡ ಅಭಿಮಾನಿಗಳು ಸಹಿಸೋದಿಲ್ಲ ಎಂದು ಕಿಡಿಕಾರಿದರು.
ಇನ್ನೂ 26 ನೇ ತಾರೀಖು ಕೇಸ್ ಕೊಡ್ತಾರೆ.. 26 ನೇ ತಾರೀಖಿಗೆ ರಾಜ್ಯಪಾಲರು ನೋಟಿಸ್ ಕೊಡ್ತಾರೆ. ಇದೆಂಥಾ ನ್ಯಾಯ.? ಶಶಿಕಲಾ ಜೊಲ್ಲೆಯ ಮೊಟ್ಟೆ ಕೇಸ್ ನಲ್ಲಿ ಲೋಕಾಯುಕ್ತರು ವರದಿ ಕೊಟ್ಟರಾ..? ರಾಜ್ಯಪಾಲರು ನೋಡದೆ ಗಮನಿಸದೆ ಸುಮ್ಮನೆ ಕುಳಿತ್ತಿರೀ ನಾಚಿಕೆ ಬರೋದಿಲ್ವಾ..? ನಿರಾಣಿ , ಜನಾರ್ದನ ರೆಡ್ಡಿ ಅವರು ನಿಮಗೆ ಬೇಕಾದವರು ಆದ್ದರಿಂ ನಿಔೇನು ಕ್ರಮ ತೆಗೆದುಕೊಳ್ತಿಲ್ಲ ಎಂದು ಎಚ್ ಕೆ ಪಾಟೀಲ್ ಗರಂ ಆಗಿದ್ದಾರೆ.
ಅದಲ್ಲದೆ ಸಿಎಂ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿಯವರ ಹೋರಾಟದ ವಿಚಾರಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ರಾಜೀನಾಮೆ ಕೊಡಲು ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಯಾರು ಬಿಡೋದಿಲ್ಲ, ನಮ್ಮ ಎಲ್ಲಾ ಮಂತ್ರಿಗಳು ಒಗ್ಗಟ್ಟಾಗಿ ಅವರ ಹಿಂದೇ ನಿಂತಿದ್ದೇವೆ. ನಮ್ಮ ಶಾಸಕರು ಬಿಜೆಪಿ ಷ್ಯಡಂತ್ರಕ್ಕೆ ಸರಿಯಾದ ಉತ್ತರ ಕೊಡಲು ನಿರ್ಣಯಿಸಿದ್ದಾರೆ. ಕಾನೂನು ಹೋರಾಟ ಮಾಡಿ ನ್ಯಾಯವನ್ನು ಪಡೆದುಕೊಂಡು ತಿರುತ್ತೇವೆ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ ಹೇಳಿದ್ದಾರೆ.