ಕೋಲಾರ: ಕಾರ್ಯಕ್ರಮದಲ್ಲಿ ಕನ್ನಡ ಧ್ವಜ ಹಾರಿಸಿಲ್ಲ, ಜಿಲ್ಲಾಡಳಿತ ವಿಫಲವಾಗಿದೆ,ನಾವು ಒಪ್ಪಿಕೊಳ್ಳುತ್ತೇವೆ ಎಂದು ಕೋಲಾರದಲ್ಲಿ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಗಡಿ ಜಿಲ್ಲೆ ಅದ್ದೂರಿಯಾಗಿ ಮಾಡಬೇಕಿತ್ತು. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಯಶಸ್ವಿಯಾಗಿಲ್ಲ. ಸಚಿವ ಭೈರತೀ ಸುರೇಶ್ ಅವರಿಗೆ ಹುಷಾರಿಲ್ಲದ ಕಾರಣ ಬಂದಿಲ್ಲ ಎಂದು ಹೇಳಿದರು. ಇನ್ನೂ ಕಾಂಗ್ರೆಸ್ ಪಕ್ಷದಲ್ಲಿ 136 ಜನ ಶಾಸಕರಿದ್ದೇವೆ. ಆಪರೇಷನ್ ಕಮಲ, ಗಿಡ ,ಮರ ಏನೂ ಇಲ್ಲ. ಕಾಂಗ್ರೆಸ್ ಸರ್ಕಾರ ಬೀಳಿಸುವ ಕನಸ್ಸು ಕಾಣೋದು ಬೇಡ ಎಂದು ವ್ಯಂಗ್ಯವಾಡಿದರು.
ರವಿ ಗಾಣಿಗಾ ಅವರಿಗೆ ಆಫರ್ ಬಂದಿರುವ ವಿಚಾರ ಗೊತ್ತಿಲ್ಲ. ನನಗೆ ಆಫರ್ ಕೊಡಲು ಯಾರು ಮುಂದೆ ಬರೋದಿಲ್ಲ ಯಾಕಂದ್ರೆ ನನ್ನ ರೇಟ್ ಬೇರೆ ಇದೆ, ತೆಗೆದುಕೊಳ್ಳುವ ಶಕ್ತಿ ಕರ್ನಾಟಕದಲ್ಲಿ ಯಾರಿಗೂ ಇಲ್ಲ, ಅಂತಹವರು ನನ್ನ ಬಳಿ ಬಂದ್ರೆ ಬೀಜ ಕ್ಯೂದು ಹಾಕುತ್ತೇನೆ ಎಂದರು. ಸಚಿವ ಸ್ಥಾನ ಬೇಕು ಅನ್ನೋರು ರಾಜೀನಾಮೆ ಕೊಟ್ಟು ಮನೆಯಲ್ಲಿ ಇರಲಿ. ಜನ ಆಯ್ಕೆ ಮಾಡಿರೋದು ಕೆಲಸ ಮಾಡೋಕೆ.
ಅನುದಾನ ನಮಗೆ ಕೊಡುತ್ತಿದ್ದಾರೆ, PWD ಇಲಾಖೆಯಿಂದ 20 ಕೋಟಿ ಕೊಟ್ಟಿದ್ದಾರೆ. ನನಗೆ ನಿಗಮ ಮಂಡಳಿ ಬೇಡ,ಮಂತ್ರಿ ಸ್ಥಾನವು ಬೇಡ. 2 ವರೆ ವರ್ಷ ಬಳಿಕ ಸಿಎಂ ಬದಲಾವಣೆ ಬಗ್ಗೆ ತೀರ್ಮಾನ ಮಾಡೋರು ಮೂರು ಜನ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಡಿಕೆ ಶಿವಕುಮಾರ್ ಮೂವರಿಗೆ ಮಾತ್ರ ಅಧಿಕಾರವಿದೆ. ಅದಲ್ಲದೆ ಸಿಎಂ ಬದಲಾವಣೆ ಪ್ರಶ್ನೆನೇ ಇಲ್ಲ, 5 ವರ್ಷ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ ಎಂದು ಹೇಳಿದರು.