ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಇಂದು ಗ್ರಾಮೀಣ ಪ್ರದೇಶವನ್ನು ನಗರೀಕರಣ ಬಾಹು ತಬ್ಬಿಕೊಳ್ಳುತ್ತಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಸತೀಶ್ ಅಭಿಪ್ರಾಯಪಟ್ಟರು.
ಹರಪನಹಳ್ಳಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಮಲ್ಲಮ್ಮ ವಡ್ಡರ್ ವಿರಚಿತ ‘ಮತಿಯ ತೇರಲಿ ಖುಷಿಯಲಿ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎನ್.ಜಿ. ಮನೋಹರ್ ಮಾತನಾಡಿ, ಸ್ಥಳೀಯ ಭಾಷೆಗಳ ಬಗ್ಗೆ ಹಿಡಿತ ಮತ್ತು ಅಭಿಮಾನವಿದ್ದವರು ಉತ್ತಮ ಸಾಹಿತ್ಯ ರಚಿಸಬಲ್ಲರು. ಜಗತ್ತಿನಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿರುವ 18 ಭಾಷೆಗಳಲ್ಲಿ ಕನ್ನಡವು ಮೇರು ಸ್ಥಾನ ಪಡೆದು ತನ್ನ ಹಿರಿಮೆಯನ್ನು ಹೆಚ್ಚಿಸಿದೆ. ಮಕ್ಕಳ ಬಾಲ್ಯಾವಸ್ಥೆಯಲ್ಲಿ ಕನ್ನಡ ಭಾಷೆಯ ಬಗ್ಗೆ ತಿಳಿಸಿದರೆ ಅವರ ವೃತ್ತಿ ಬದುಕಿನಲ್ಲಿ ಅದನ್ನು ಗಟ್ಟಿಯಾಗಿ ಅಳವಡಿಸಿಕೊಳ್ಳುತ್ತಾರೆ ಎಂದರು.
ಕವಯತ್ರಿ ಮಲ್ಲಮ್ಮ ವಡ್ಡರ್ ಮಾತನಾಡಿ, ಕನ್ನಡ ಭಾಷೆಯು ಅತ್ಯಂತ ಶ್ರೀಮಂತ ಶಬ್ದ ಭಂಡಾರದಿಂದ ಕೂಡಿದೆ. ಕನ್ನಡ ಭಾಷೆಯ ಉಳಿವಿಗಾಗಿ ಪ್ರತಿಯೊಬ್ಬರಲ್ಲೂ ಸಾಹಿತ್ಯದ ಅಭಿರುಚಿಯನ್ನು ಮೂಡಿಸಬೇಕು ಎಂದರು.
ಕಸಾಪ ಅಧ್ಯಕ್ಷ ಕೆ. ಉಚ್ಚಂಗೆಪ್ಪ, ಅಧ್ಯಕ್ಷೆ ಸುಭದ್ರಮ್ಮ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಗುರುಮೂರ್ತಿ ಬೋರಯ್ಯ, ಸಾವಿತ್ರಿಬಾಯಿ ಪುಲೆ ಸಂಘದ ತಾಲೂಕು ಅಧ್ಯಕ್ಷೆ ಟಿ.ಎಚ್.ಎಂ. ಲತಾ ಮಾತನಾಡಿದರು.
ಈ ವೇಳೆ ಸರ್ಕಾರಿ ನೌಕರರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸೂರ್ಯನಾಯ್ಕ, ಡಾ. ಎಂ. ಸುರೇಶ್, ಹಾರಾಳ್ ಬುಳ್ಳಪ್ಪ, ಕೆ.ಎನ್. ಬಸವರಾಜ್, ಸಾಹಿತಿ ಪೂಜಾರ್ ಬಸವರಾಜ್, ತಿರುಪತಿ, ಎಂ. ದಾದಾಸಾಬ್, ಅನಿತ ಎಸ್., ಪ್ರಿಯಾಂಕ ಎಂ.ಡಿ., ಶಾರದಮ್ಮ, ಶಬೀನಾ, ಶಶಿಕಲಾ, ನಾಗಭೂಷಣ ಸೇರಿದಂತೆ ಇತರರಿದ್ದರು.


