ಗದುಗಿನ ಮಹೇಶ್ ಪಬ್ಲಿಕ್ ಸ್ಕೂಲ್‌ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಪ್ರೊ. ಮಹಾಂತೇಶ ಬಾತಖಾನಿ, ಕರ್ನಾಟಕದ ಏಕೀಕರಣದದಲ್ಲಿ ಗದಗ ಜಿಲ್ಲೆಯ ಕೊಡುಗೆಗಳ ಬಗ್ಗೆ ಮಾತನಾಡಿದರು. ಸಮಾರಂಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯೆ ವಿಜಯಲಕ್ಷ್ಮಿ, ಸಹ ಶಿಕ್ಷಕರಾದ ಸವಿತಾ, ಲಲಿತಾ, ಸಿರಿಗೌರಿ, ಐಶ್ವರ್ಯ, ಶಾರದಾ, ತ್ರಿವೇಣಿ, ಸವಿತಾ ಗೌಡರ್ ಕನ್ನಡ ರಾಜ್ಯೋತ್ಸವದ ಕುರಿತು ಮಾತನಾಡಿದರು. ಸಹ ಶಿಕ್ಷಕರಾದ ಭಾಗ್ಯಶ್ರೀ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಸಚಿನ್ ಕೋಡೆ ವಂದಿಸಿದರು.