ಕನ್ನಡ ಶಾಲೆಗಳು ತಾಯಿಯ ಮಡಿಲಂತೆ: ಶಿಕ್ಷಕ ಮಂಜುನಾಥ ಮಟ್ಟಿ

0
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಕನ್ನಡ ಶಾಲೆಗಳು ಕನ್ನಡ ಭಾಷೆಯ ತೊಟ್ಟಿಲುಗಳಿದ್ದಂತೆ. ತಾಯ್ನುಡಿ ಉಳಿದು-ಬೆಳೆದು ಹೆಮ್ಮರವಾಗಿ ಬೆಳೆಯಬೇಕು. ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರದಾಗಿದೆ. ಕನ್ನಡ ಶಾಲೆಗಳು ತಾಯಿಯ ಮಡಿಲಿನಂತೆ ಎಂದು ಶಿಕ್ಷಕ ಮಂಜುನಾಥ ಮಟ್ಟಿ ಹೇಳಿದರು.

Advertisement

ಅವರು ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ನಡೆದ ಶಾಲೆಯ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಗು ಕನ್ನಡ ಭಾಷೆನ್ನು ಅಚ್ಚು ಕಟ್ಟಾಗಿ ಕಲಿಯಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲೆಂದು ಸರಕಾರ ಗುಣಮಟ್ಟದ ಶಿಕ್ಷಕರನ್ನು, ಮಧ್ಯಾಹ್ನದ ಬಿಸಿಊಟ, ಸಮವಸ್ತ್ರದ ಸೌಲಭ್ಯ ನೀಡುವ ಮೂಲಕ ಕನ್ನಡ ಶಾಲೆ ಉಳಿಸಿ ಬೆಳೆಸುತ್ತಿದೆ ಎಂದರು.

ಶಾಲಾ ಪ್ರಧಾನ ಗುರು ಪಿ.ಬಿ. ಕೆಂಚನಗೌಡರ, ಎಸ್‌ಡಿಎಂಸಿ ಅಧ್ಯಕ್ಷ ವಿ.ಡಿ. ಸಿದ್ದನಗೌಡರ, ಎಂ.ಎಂ.ಮೇಗಲಮನಿ, ಎಂ.ಎಂ. ಕೊಪ್ಪಳ, ಕೆ.ಎಂ. ಹೆರಕಲ್ಲ, ಮಂಜುನಾಥ ಕಲ್ಯಾಣಮಠ, ಎಸ್.ಎಚ್. ಉಪ್ಪಾರ, ಎಚ್.ಆರ್. ಬಜಂತ್ರಿ, ಟಿ.ವೀಣಾ, ಎಸ್.ವಿ. ಹಿರೇಮಠ, ವಿ.ಎಂ. ಕಂಠಿ, ನಂದಾ ಮಟ್ಟಿ, ಜ್ಯೋತಿ ಜಾಧಾವ, ಪವಿತ್ರಾ ಮಟ್ಟಿ, ರೇಣುಕಾ ಪರ್ವತಗೌಡರ ಇದ್ದರು.


Spread the love

LEAVE A REPLY

Please enter your comment!
Please enter your name here