ಬೆಂಗಳೂರು:- “ಕನ್ನಡತಿ” ಧಾರವಾಹಿಯ ಮೂಲಕ ಮನೆಮಾತಾಗಿದ್ದ ಖ್ಯಾತ ನಟ ಕಿರಣ್ ರಾಜ್ ಕಾರು ಅಪಘಾತಕ್ಕೀಡಾಗಿದ್ದು, ಕಾರು ಫುಲ್ ಜಖಂ ಆದ ಪರಿಣಾಮ ನಟನ ಎದೆಯ ಭಾಗಕ್ಕೆ ಭಾರಿ ಪೆಟ್ಟು ಬಿದ್ದಿದೆ.
ಕಾರು ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಕಿರಣ್ ರಾಜ್ ಅವರ ಎದೆಯ ಭಾಗಕ್ಕೆ ಪೆಟ್ಟು ಬಿದ್ದಿದೆ. ಆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ನಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರಿಂದ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.
ಕಿರಣ್ ರಾಜ್ ಜೊತೆ ಕಾರಿನಲ್ಲಿ ಎಕ್ಸಿಕ್ಯೂಟಿವ್ ಪ್ರಡ್ಯೂಸರ್ ಇದ್ದರು. ಈ ಪ್ರಡ್ಯೂಸರ್ ಸೀಟ್ ಬೆಲ್ಟ್ ಹಾಕಿದ್ದ ಕಾರಣ ಸೇಫ್ ಆಗಿದ್ದಾರೆ. ಕಿರಣ್ ಸೀಟ್ ಬೆಲ್ಟ್ ಧರಿಸಿರುವ ಬಗ್ಗೆ ಸ್ಪಷ್ಟನೆ ಇಲ್ಲ.
ಕಿರಣ್ ರಾಜ್ ಬಳಿ ಇದ್ದಿದ್ದು ಕಪ್ಪು ಬಣ್ಣದ ಮರ್ಸಿಡಿಸ್-ಬೆನ್ಜ್ ಕಾರು. ಸಾಮಾನ್ಯವಾಗಿ ಭಾರತದಲ್ಲಿ ಈ ಕಾರುಗಳ ಬೆಲೆ 45 ಲಕ್ಷ ರೂಪಾಯಿಗಳಿಂದ ಆರಂಭವಾಗಿ 3 ಕೋಟಿಯವರೆಗೂ ಇದೆ ಎನ್ನಲಾಗಿದೆ.