ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ಬೆಳ್ಳಿದೀಪ ಪ್ರೊಡಕ್ಷನ್ಸ್ ಬೆಂಗಳೂರು ಅವರ ‘ಕನ್ನಡಿ’ ಸಾಮಾಜಿಕ ಕಳಕಳಿಯ ಚಲನಚಿತ್ರ ಅಮೆರಿಕ ಕನ್ನಡ ಕೂಟಗಳ ‘ಅಕ್ಕ’ ವಿಶ್ವ ಸಮ್ಮೇಳನ-2024ರ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ.
ಈ ಕುರಿತು ‘ಅಕ್ಕ’ ಸಮ್ಮೇಳನದ ಕಾರ್ಯದರ್ಶಿ ಮಾದೇಶ ಬಸವರಾಜು ಮಾಹಿತಿ ನೀಡಿದ್ದು, ವೇಶ್ಯಾವಾಟಿಕೆಯ ಸುತ್ತ ಹೆಣೆದ ಕಥಾನಕ ‘ಕನ್ನಡಿ’ ಚಿತ್ರ. ಈಗಾಗಲೇ ಮೈಸೂರು ದಸರಾ ಮಹೋತ್ಸವ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಆಯ್ಕೆಯಾಗಿ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಇದೀಗ ಅಕ್ಕ ಸಮ್ಮೇಳನಲ್ಲೂ ಪ್ರದರ್ಶನಕ್ಕೆ ಆಯ್ಕೆಯಾಗಿದ್ದಕ್ಕೆ ನಿರ್ಮಾಪಕ ಬೆಳ್ಳಿಚುಕ್ಕಿ ವೀರೇಂದ್ರ ಖುಷಿಯನ್ನು ಚಿತ್ರತಂಡದೊಂದಿಗೆ ಹಂಚಿಕೊಂಡರು.
ತಾರಾ ಬಳಗದಲ್ಲಿ ನಮಿತಾ ರಾವ್, ಶಶಾಂಕ್ ಸಿಂಹ, ಎ .ಗೋವಿಂದ, ನಟರಾಜ್ ಬೆಳ್ಳಿದೀಪ, ಮೈಕೋಮಂಜು, ಅಲಕಾನಂದ, ರೇಣುಕಾ ಶಿಕಾರಿ, ಮೈಸೂರು ಮಂಜುಳಾ, ಕಾವೇರಿ ಶ್ರೀಧರ್, ಕವಿತಾ ಕಂಬಾರ್, ಎಸ್.ವಿ. ರವಿಶಂಕರ್, ವಿನೋದ್, ರಾಜೇಶ್ ಅಂಜನಾಪುರ ಇತರರಿದ್ದಾರೆ. ತಾಂತ್ರಿಕವರ್ಗದಲ್ಲಿ-ಛಾಯಾಗ್ರಹಣ ಆರ್ ಗಿರಿ, ಸಂಗೀತ ಶಿವ ಸತ್ಯ, ವಸ್ತ್ರ ವಿನ್ಯಾಸ ರೇಷ್ಮಾ ಬೆಳ್ಳಿದೀಪ, ಹಿನ್ನೆಲೆ ಗಾಯಕರು ಮಾನಸ ಹೊಳ್ಳ, ಆಕಾಂಕ್ಷ ಬಾದಾಮಿ, ಕಡಬಗೆರೆ ಮುನಿರಾಜು, ಸಂಕಲನ ಮುತ್ತುರಾಜ್, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಗೀತ ರಚನೆ, ನಟನೆ, ನಿರ್ಮಾಣ ಬೆಳ್ಳಿಚುಕ್ಕಿ ವೀರೇಂದ್ರ ಅವರದಿದದ್ದು, ಶರಣ್ ಗದ್ವಾಲ್ ನಿರ್ದೇಶಿಸಿದ್ದಾರೆ.