ಇಂದು ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ಹರಿ ಹರ ವೀರಮಲ್ಲು ಸಿನಿಮಾ ಬಿಡುಗಡೆಯಾಗಿದ್ದು ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಿಸಿದ್ದಾರೆ. ಆದರೆ ಹರಿ ಹರ ವೀರಮಲ್ಲು ಚಿತ್ರಕ್ಕೆ ಹಾಕಿದ್ದ ಬ್ಯಾನರ್ ನ ಕಿತ್ತು ಹಾಕಿ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ಹರಿ ಹರ ವೀರಮಲ್ಲು ಚಿತ್ರಕ್ಕೆ ಹಾಕಿದ್ದ ಬ್ಯಾನರ್ ನಲ್ಲಿ ಕನ್ನಡ ಇಲ್ಲ ಎಂದು ಕನ್ನಡಪರ ಸಂಘಟನೆಯ ಕಾರ್ಯಕರ್ತರು ಬ್ಯಾನರ್ ಕಿತ್ತು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದು, ಇದಕ್ಕೆ ಕೌಂಟರ್ ಎನ್ನುವಂತೆ ಪವನ್ ಕಲ್ಯಾಣ್ ಅಭಿಮಾನಿಗಳ ಹುಚ್ಚಾಟವಾಡಿದ್ದಾರೆ.
ಪವನ್ ಕಲ್ಯಾಣ್ ನಟನೆಯ ಸಿನಿಮಾವೊಂದು ಸಾಕಷ್ಟು ವರ್ಷಗಳ ಬಳಿಕ ರಿಲೀಸ್ ಆಗುತ್ತಿದೆ. ಹೀಗಾಗಿ ಪವನ್ ಅಭಿಮಾನಿಗಳು ಸಾಕಷ್ಟು ದಿನದಿಂದ ಕಾದು ಸಿನಿಮಾ ವೀಕ್ಷಿಸಿದ್ದಾರೆ. ಇದು ಪವನ್ ಕಲ್ಯಾಣ್ ವೃತ್ತಿ ಬದುಕಿನಲ್ಲೇ ವಿಶಿಷ್ಠ ಸಿನಿಮಾವಾಗಿದೆ. ಆದರೆ ಮಡಿವಾಳ ಸಮೀಪವಿರುವ ಸಂಧ್ಯಾ ಚಿತ್ರಮಂದಿರಲ್ಲಿ ಹರಿ ಹರ ವೀರಮಲ್ಲು ಸಿನಿಮಾದ ಬ್ಯಾನರ್‌ಗಳಲ್ಲಿ ಕನ್ನಡ ಇಲ್ಲ ಎಂಬ ಕಾರಣಕ್ಕೆ ಬ್ಯಾನರ್ ಹರಿದು ಹಾಕಿದ್ದಾರೆ. ಅಲ್ಲದೇ ಕರ್ನಾಟಕದಲ್ಲಿ ಕನ್ನಡ ಮೊದಲು ಎಂದಿದ್ದಾರೆ.
ಕನ್ನಡ ಪರ ಸಂಘಟನೆಗಳು ಎಂಟ್ರಿ ಕೊಟ್ಟು ತೆಲುಗು ಬ್ಯಾನರ್‌ಗಳನ್ನು ಕಿತ್ತಾಕಿದ ಬಳಿಕ ಫ್ಯಾನ್ಸ್ ಎಚ್ಚೆತ್ತುಕೊಂಡಿದ್ದಾರೆ. ಸಂಧ್ಯಾ ಚಿತ್ರಮಂದಿರದ ಮುಂದೆ ಕನ್ನಡದ ಬ್ಯಾನರ್‌ಗಳನ್ನು ಹಾಕಿದ್ದಾರೆ.