ಬೆಂಗಳೂರು: ಕನ್ನಡದ ಬಗ್ಗೆ ಧಿಮಾಕಿನ ಮಾತಾಡಿದ್ರೆ ಕನ್ನಡಿಗರು ಸಹಿಸುವುದಿಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳಿಗೆ ಕಾನೂನು ತರುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ಕನ್ನಡದ ಬಗ್ಗೆ ಧಿಮಾಕಿನ ಮಾತಾಡಿದ್ರೆ ಕನ್ನಡಿಗರು ಸಹಿಸುವುದಿಲ್ಲ ಎಂದರು.
Advertisement
ಶಿವರಾಜ್ ಕುಮಾರ್ ಹಿರಿಯ ನಟರು, ಅವರಿಗೆ ಕಮಲ್ ಹಾಸನ್ ಬಗ್ಗೆ ಗೌರವ ಇದ್ದರೆ ಇರಲಿ. ಆದರೆ ಮೊದಲು ನಮ್ಮ ಭಾಷೆ ಮುಖ್ಯ. ಅವರು ಕ್ಷಮೆ ಕೇಳದೇ ಹೋದ್ರೆ ಅವರ ಸಿನಿಮಾ ಬ್ಯಾನ್ ಮಾಡುತ್ತೇವೆ. ಸರ್ಕಾರದ ವತಿಯಿಂದ ಏನು ಮಾಡಬಹುದು ಅಂತ ಸಿಎಂ ಜೊತೆಯೂ ಚರ್ಚೆ ಮಾಡ್ತೇನೆ ಎಂದು ಹೇಳಿದರು.