HomeEntertainment‘ಕಣ್ಣಪ್ಪ’ ಸಿನಿಮಾದ ಹಾರ್ಡ್‌ ಡ್ರೈವ್ ಕಳವು: ದೂರು ನೀಡಿದ ನಿರ್ಮಾಪಕ

‘ಕಣ್ಣಪ್ಪ’ ಸಿನಿಮಾದ ಹಾರ್ಡ್‌ ಡ್ರೈವ್ ಕಳವು: ದೂರು ನೀಡಿದ ನಿರ್ಮಾಪಕ

For Dai;y Updates Join Our whatsapp Group

Spread the love

ತೆಲುಗು ನಟ ವಿಷ್ಣು ಮಂಚು ನಟನೆಯ, ಬಹುತಾರಾಗಣದ, ದುಬಾರಿ ವೆಚ್ಚದಲ್ಲಿ ನಿರ್ಮಾಣವಾದ ಕಣ್ಣಪ್ಪ ಸಿನಿಮಾ ಬಿಡುಗಡೆಗೆ ಇನ್ನೇನ್ನೂ ಎರಡು ವಾರಗಳು ಮಾತ್ರವೇ ಭಾಕಿ ಇದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಭರ್ಜರಿ ಪ್ರಮೋಷನ್‌ ಕಾರ್ಯದಲ್ಲಿ ತೊಡಗಿಕೊಂಡಿದೆ. ಆದ್ರೆ ಇದೀಗ ಚಿತ್ರತಂಡಕ್ಕೆ ದೊಡ್ಡದೊಂದು ಸಮಸ್ಯೆ ಶುರುವಾಗಿದ್ದು ಇದರಿಂದ ಇಡೀ ಚಿತ್ರತಂಡ ಕಂಗಾಲಾಗಿದೆ.

ನೂರಾರು ಕೋಟಿ ಬಜೆಟ್​ನ ಪೌರಾಣಿಕ ಸಿನಿಮಾವಾಗಿರೋ ‘ಕಣ್ಣಪ್ಪ’ ಸಿನಿಮಾದ ಹಾರ್ಡ್​ಡ್ರೈವ್ ಕಳ್ಳತನವಾಗಿದೆ. ಇದರಿಂದಾಗಿ ಕಂಗಾಲಾಗಿರುವ ನಿರ್ಮಾಪಕರು ಹೈದರಾಬಾದ್​ನ ಫಿಲಂ ನಗರ್​ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮುಂಬೈನ ಎಚ್​ಐವಿಇ ಸ್ಟುಡಿಯೋನಲ್ಲಿ ‘ಕಣ್ಣಪ್ಪ’ ಸಿನಿಮಾದ ವಿಎಫ್​ಎಕ್ಸ್ ಕೆಲಸ ಮಾಡಿಸಲಾಗಿತ್ತು. ಆ ಬಳಿಕ ಎಚ್​ಐವಿಇ ಸ್ಟುಡಿಯೋನವರು ಕೊರಿಯರ್​ನಲ್ಲಿ ಎರಡು ಹಾರ್ಡ್​ ಡಿಸ್ಕ್​ಗಳನ್ನು ಹೈದರಾಬಾದ್​ನ ಫಿಲಂ ನಗರ್​ನ ಫೋರ್ ಫ್ರೇಮ್ಸ್ ಸ್ಟುಡಿಯೋಕ್ಕೆ ಕೊರಿಯರ್ ಮಾಡಿದ್ದಾರೆ. ಅಧಿಕೃತ ನಿರ್ಮಾಣ ಸಂಸ್ಥೆಗೆ ಕಳುಹಿಸಲಾದ ಡ್ರೈವ್‌ಗೆ ರಘು ಎಂಬ ವ್ಯಕ್ತಿ ಕಾನೂನುಬಾಹಿರವಾಗಿ ಸಹಿ ಮಾಡಿ ಖರೀದಿಸಿದ್ದಾನೆ ಎನ್ನಲಾಗಿದೆ. ಆ ಹಾರ್ಡ್​ ಡಿಸ್ಕ್​ಗಳನ್ನು ರಘು ಎಂಬಾತ ಚರಿತಾ ಹೆಸರಿನ ಯುವತಿಗೆ ನೀಡಿದ್ದರಂತೆ. ಆದರೆ ಈಗ ರಘು ಮತ್ತು ಚರಿತಾ ಇಬ್ಬರು ಕಾಣೆಯಾಗಿದ್ದಾರೆ.

ರಘು ಹಾಗೂ ಚರಿತಾ ಸೇರಿ ಹಾರ್ಡ್​ ಡಿಸ್ಕ್​ಗಳನ್ನು ತೆಗೆದುಕೊಂಡು ಪರಾರಿ ಆಗಿದ್ದಾರೆ ಎಂಬ ಅನುಮಾನವನ್ನು ವ್ಯಕ್ತಪಡಿಸಿ ನಿರ್ಮಾಪಕರು ದೂರು ನೀಡಿದ್ದಾರೆ. ನಿರ್ಮಾಪಕರು ನೀಡಿದ ದೂರಿನ ಮೇರೆಗೆ ಫಿಲಂ ನಗರ್ ಪೊಲೀಸರು ಚರಿತಾ ಹಾಗೂ ರಘುಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಪ್ರಮುಖ ಕ್ರಿಯೆಯನ್ನು ಹೊಂದಿರುವ ಹಾರ್ಡ್ ಡ್ರೈವ್… — 24 ಫ್ರೇಮ್ಸ್ ಫ್ಯಾಕ್ಟರಿ ಮೇ 27, 2025 ಮುಂಬೈನ ಹೈವ್ ಸ್ಟುಡಿಯೋಸ್‌ನಿಂದ ತಮ್ಮ ಅಧಿಕೃತ ನಿರ್ಮಾಣ ಸಂಸ್ಥೆಗೆ ಸಾಗಿಸುವಾಗ ಹಾರ್ಡ್ ಡ್ರೈವ್ ಕಳೆದುಹೋಗಿದೆ ಎಂದು ನಿರ್ಮಾಪಕರು ಹೇಳಿದ್ದಾರೆ.

ವೈಯಕ್ತಿಕ ದ್ವೇಷವನ್ನು ಇತ್ಯರ್ಥಪಡಿಸಿಕೊಳ್ಳುವ ಪ್ರಯತ್ನ ದುರದೃಷ್ಟಕರ ಎಂದು ಅವರು ಗಮನಸೆಳೆದರು. ತೆಲುಗು ಸಿನಿಮಾ ಜಾಗತಿಕ ಮನ್ನಣೆ ಪಡೆಯುತ್ತಿರುವ ಸಮಯದಲ್ಲಿ ಇಂತಹ ಕೃತ್ಯಗಳು ನಾಚಿಕೆಗೇಡಿನ ಸಂಗತಿ ಎಂದು 24 ಫ್ರೇಮ್ಸ್ ಫ್ಯಾಕ್ಟರಿ ಹೇಳಿಕೊಂಡಿದೆ.

“ಕಣ್ಣಪ್ಪ ಚಿತ್ರವನ್ನು ಸಿನಿಮಾದಲ್ಲಿ ಮೈಲಿಗಲ್ಲಾಗಿ ರೂಪಿಸಲು ಅಚಲ ಬದ್ಧತೆಯಿಂದ ಕೆಲಸ ಮಾಡಿದ ನಮ್ಮ ತಂಡ, ಪಾತ್ರವರ್ಗ ಮತ್ತು ಎಲ್ಲಾ ತಂತ್ರಜ್ಞರೊಂದಿಗೆ ನಾವು ಒಗ್ಗಟ್ಟಿನಿಂದ ನಿಲ್ಲುತ್ತೇವೆ. ಈ ಹೇಡಿತನದ ಪ್ರಯತ್ನಗಳಿಂದ ನಾವು ಬಗ್ಗುವುದಿಲ್ಲ. ಸತ್ಯವು ಮೇಲುಗೈ ಸಾಧಿಸುತ್ತದೆ ಎಂದು ನಾವು ನಂಬುತ್ತೇವೆ ಎಂದು ನಿರ್ಮಾಪಕರು ಹೇಳಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!