ಕಾಂತಾರ ಸಿನಿಮಾದ ಬಳಿಕ ಸಖತ್ ಖ್ಯಾತಿ ಘಳಿಸಿದ ನಟಿ ಸಪ್ತಮಿ ಗೌಡ ಇದೀಗ ಟಾಲಿವುಡ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ತೆಲುಗು ನಟ ನಿತಿನ್‌ಗೆ ನಾಯಕಿಯಾಗಿ ಸಪ್ತಮಿ ಟಾಲಿವುಡ್ ಗೆ ಎಂಟ್ರಿಕೊಟ್ಟಿದ್ದಾರೆ. ರತ್ನ ಪಾತ್ರದ ಮೂಲಕ ಹಳ್ಳಿ ಹುಡುಗಿ ಗೆಟಪ್‌ನಲ್ಲಿ ಸಪ್ತಮಿ ಕಾಣಿಸಿಕೊಂಡಿದ್ದು ಸದ್ಯ ಸಪ್ತಮಿ ಹಾಗೂ ನಿತಿನ್ ನಟನೆಯ ‘ಮೂಡ್ ಆಫ್ ತಮ್ಮುಡು’ ಚಿತ್ರದ ಸಪ್ತಮಿ ಪಾತ್ರದ ಟೀಸರ್ ರಿಲೀಸ್ ಆಗಿದೆ.
‘ಮೂಡ್ ಆಫ್ ತಮ್ಮುಡು’ ಚಿತ್ರದ ಮೂಲಕ ಸಪ್ತಮಿ ತೆಲುಗಿನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಸಪ್ತಮಿ ರತ್ನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಲಂಗ ದಾವಣಿ ಧರಿಸಿದ್ದಾರೆ. ಅದಷ್ಟೇ ಅಲ್ಲ, ಇಲ್ಲಿ ನಿತಿನ್ ಪಾತ್ರದ ಲುಕ್ ಕೂಡ ಅನಾವರಣ ಆಗಿದೆ.
ಬಿಲ್ಲು ಬಾಣ ಹಿಡಿದ ಗೆಟಪ್‌ನಲ್ಲಿ ನಿತಿನ್ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಕೊಡಗಿನ ನಟಿ ವರ್ಷ ಬೊಳ್ಳಮ್ಮ, ಸೌರಭ್ ಸಚ್‌ದೇವ್ ಸೇರಿದಂತೆ ಅನೇಕರು ನಟಿಸಿದ್ದಾರೆ. ದಿಲ್ ರಾಜು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಶ್ರೀರಾಮ್ ವೇಣು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಜುಲೈ 4ರಂದು ಸಿನಿಮಾ ರಿಲೀಸ್ ಆಗಲಿದೆ.