ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1’ ಚಿತ್ರದ ರಿಲೀಸ್ ಗೆ ಇನ್ನೊಂದು ವಾರ ಮಾತ್ರವೇ ಭಾಕಿ ಇದೆ. ಸಿನಿಮಾ ನೋಡಲು ಪ್ರತಿಯೊಬ್ಬರು ತುದಿಗಾಲಲ್ಲಿ ನಿಂತಿದ್ದಾರೆ. ಈ ಮಧ್ಯೆ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದು ಈಗಾಗಲೇ ಹಲವು ಶೋಗಳು ಸೋಲ್ಡ್ ಔಟ್ ಆಗಿದೆ.
ಈಗಾಗಲೇ ಪಿವಿಆರ್, ಐನಾಕ್ಸ್ ಸೇರಿ ಹಲವು ಮಲ್ಟಿಪ್ಲೆಕ್ಸ್ಗಳಲ್ಲಿ ಚಿತ್ರಕ್ಕೆ ಸಾಕಷ್ಟು ಶೋಗಳನ್ನು ನೀಡಲಾಗಿದ್ದು ಹಲವು ಶೋಗಳು ಸೋಲ್ಡ್ ಔಟ್ ಆಗಿದೆ. ಇದರ ಜೊತೆಗೆ ಸಿಂಗಲ್ ಸ್ಕ್ರೀನ್ಗಳ ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಬಿಡಲಾಗಿದೆ. ಬುಕಿಂಗ್ ಆರಂಭ ಆಗುತ್ತಿದ್ದಂತೆ ಹಲವು ಶೋಗಳು ಸೋಲ್ಡ್ಔಟ್ ಆಗಿವೆ. ಇನ್ನು, ಸಿನಿಮಾ ಟಿಕೆಟ್ ದರವನ್ನು ದುಬಾರಿ ಮೊತ್ತಕ್ಕೆ ಮಾರಟ ಮಾಡಲಾಗುತ್ತಿದೆ.
‘ಕಾಂತಾರ’: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ರಿಲೀಸ್ ಆಗಲಿದೆ. ಬೆಂಗಳೂರು ಒಂದರಲ್ಲೇ ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ನೂರಾರು ಶೋಗಳನ್ನು ನೀಡಲಾಗಿದೆ. ಸಿಂಗಲ್ ಸ್ಕ್ರೀನ್ ಥಿಯೇಟರ್ಗಳಲ್ಲಿ ಮೊದಲ ದಿನ ಆರು ಶೋಗಳನ್ನು ಪ್ರದರ್ಶನ ಮಾಡಲಾಗುತ್ತಿದೆ. ಪಿವಿಆರ್ ಜೊತೆ ಹೊಂಬಾಳೆ ಒಪ್ಪಂದ ಮಾಡಿಕೊಂಡಿದ್ದು, ಇದರ ಅನ್ವಯ ಐನಾಕ್ಸ್ ಹಾಗೂ ಪಿವಿಆರ್ ಇದ್ದ ಕಡೆ ಸಿನಿಮಾಗೆ ಹೆಚ್ಚಿನ ಶೋ ಸಿಗೋ ನಿರೀಕ್ಷೆ ಇದೆ.
ಬೆಂಗಳೂರಿನ ಮಲ್ಟಿಪ್ಲೆಕ್ಸ್ಗಳಲ್ಲಿ ಒಂದಾದ ಒರಾಯನ್ ಪಿವಿಆರ್ ನಲ್ಲಿ ಅಕ್ಟೋಬರ್ 2ಕ್ಕೆ 15 ಶೋಗಳನ್ನು ನೀಡಲಾಗಿದೆ. ಈ ಎಲ್ಲಾ ಶೋಗಳ ಹೌಸ್ಫುಲ್ ಆಗುತ್ತಿವೆ. ಕೆಲವೇ ಸೀಟ್ಗಳು ಮಾರಾಟ ಆದರೆ, ಈ ಶೋಗಳು ಸೋಲ್ಡ್ಔಟ್ ಆಗಲಿವೆ.
ಮಲ್ಟಿಪ್ಲೆಕ್ಸ್ಗಳಲ್ಲಿ ಕ್ಲಾಸಿಕ್ ಅಂದರೆ ಕೆಳ ಹಂತದ ಆಸನಗಳಿಗೆ 340-400 ರೂಪಾಯಿ ಆಸುಪಾಸಿನಲ್ಲಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ಪ್ರೈಮ್ ಆಸನಗಳಿಗೆ 450-500 ರೂಪಾಯಿ ಟಿಕೆಟ್ ದರ ನಿಗದಿ ಆಗಿದೆ. ರಿಕ್ಲೈನರ್ ಆಸನಗಳಿಗೆ 800 ರೂಪಾಯಿ ಆಸುಪಾಸಿನಲ್ಲಿ ಟಿಕೆಟ್ ದರ ಇದೆ. ಥಿಯೇಟರ್ನಲ್ಲಿ 200 ರೂಪಾಯಿಯಿಂದ 350 ರೂಪಾಯಿ ಆಸುಪಾಸಿನಲ್ಲಿ ದರ ನಿಗದಿ ಆಗಿದೆ.