ಕಾಂತಾರ ಚಾಪ್ಟರ್‌ 1 ಬರೀ ಸಿನಿಮಾ ಅಲ್ಲ `ಶಕ್ತಿ’ ಎಂದ ರಿಷಬ್ ಶೆಟ್ಟಿ

0
Spread the love

ರಿಷಬ್‌ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ಬಹುನಿರೀಕ್ಷಿತ ಕಾಂತಾರ ಚಾಪ್ಟರ್‌ ೧ ಸಿನಿಮಾ ಹಲವು ವಿಘ್ನಗಳನ್ನು ಎದುರಿಸಿ ಶೂಟಿಂಗ್‌ ಕಂಪ್ಲೀಟ್‌ ಮಾಡಿದೆ. ಈ ಬಗ್ಗೆ ರಿಷಬ್‌ ಶೆಟ್ಟಿ ಅಧಿಕೃತವಾಗಿ ಹೇಳಿಕೊಂಡಿದ್ದು ಕಾಂತಾರಾ ಸಿನಿಮಾದ ಮೊದಲ ಮೇಕಿಂಗ್‌ ವಿಡಿಯೋ ರಿಲೀಸ್‌ ಮಾಡಿದ್ದಾರೆ.

Advertisement

ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ಈ ಪ್ಯಾನ್-ಇಂಡಿಯಾ ಚಿತ್ರವು ಅಕ್ಟೋಬರ್ 2 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 2022ರಲ್ಲಿ ತೆರೆಕಂಡ ಸೂಪರ್‌ ಡ್ಯೂಪರ್‌ ಹಿಟ್‌ ‘ಕಾಂತಾರ’ ಚಿತ್ರದ ಪ್ರೀಕ್ವೆಲ್ ಇದಾಗಿದ್ದು ಸಾಕಷ್ಟು ನಿರೀಕ್ಷೆ ಮೂಡಿಸಿದೆ.

ಮೇಕಿಂಗ್ ಬ್ಯಾಗ್ರೌಂಡ್‌ನಲ್ಲಿ ಕಾಂತಾರ ಸೃಷ್ಟಿಯಾಗಿರುವ ಜೊತೆಗೆ ಎದುರಾದ ವಿಘ್ನಗಳ ಬಗ್ಗೆ ವಿವರಿಸಿದ್ದಾರೆ. ಎಲ್ಲವನ್ನೂ ಎದುರಿಸಿ ಸಿನಿಮಾ ಆಗಬೇಕಾದರೆ ಇದು ಸಾಧ್ಯವಾಗಿದ್ದು ದೈವಶಕ್ತಿಯಿಂದ ಮಾತ್ರ ಸಾಧ್ಯ ಎಂದು ರಿಷಬ್‌ ಶೆಟ್ಟಿ ಹೇಳಿದ್ದಾರೆ.

ಕಾಂತಾರ ಸಿನಿಮಾ ಮಾಡುವುದರ ಉದ್ದೇಶ ಏನು? ಸೆಟ್‌ನಲ್ಲಿ ಎಷ್ಟು ಮಂದಿ ಕಾರ್ಯನಿರ್ವಹಿಸಿದ್ದರು ಹಾಗೂ ಎಷ್ಟು ದಿನ ಚಿತ್ರೀಕರಣ ನಡೆದಿದೆ ಅನ್ನೋದನ್ನ ರಿಷಬ್ ಶೆಟ್ಟಿ ತಿಳಿಸಿದ್ದಾರೆ.

ರಿಷಬ್ ಹೇಳಿದ್ದೇನು ?
ನಮ್ಮ ಮಣ್ಣಿನ ಕಥೆಯನ್ನು ಇಡೀ ಪ್ರಪಂಚಕ್ಕೆ ಹೇಳಬೇಕನ್ನೋದು ನನ್ನದೊಂದು ಕನಸು. ನಮ್ಮ ಊರು, ನಮ್ಮ ಜನ, ನಮ್ಮ ಬಂಧುಗಳು, ನಾನು ಆ ಕನಸಿನ ಬೆನ್ನು ಹತ್ತಿದಾಗ ಸಾವಿರಾರು ಜನ ನನ್ನ ಬಳಿ ಬಂದರು. 3 ವರ್ಷಗಳ ಪರಿಶ್ರಮ, 250 ದಿನಗಳ ಚಿತ್ರೀಕರಣ, ಎಷ್ಟೇ ಕಷ್ಟ ಬಂದ್ರೂ ನಾನು ನಂಬಿರುವ ದೈವ ನನ್ನ ಕೈ ಬಿಡಲಿಲ್ಲ. ನನ್ನ ಇಡೀ ತಂಡ, ನಿರ್ಮಾಪಕರು ನನ್ನ ಬೆನ್ನೆಲುಬು. ಪ್ರತಿ ದಿನ ಸೆಟ್‌ನಲ್ಲಿ ಸಾವಿರಾರು ಜನರನ್ನ ನೋಡ್ತಿದ್ದಾಗ ನನಗೆ ಕಾಡ್ತಿದ್ದ ವಿಷಯ ಒಂದೇ. ಇದು ಸಿನಿಮಾ ಅಲ್ಲ ಇದೊಂದು ಶಕ್ತಿ. ಕಾಂತಾರ ಶೂಟಿಂಗ್ ವೇಳೆ ಉಂಟಾದ ಹಲವು ವಿಘ್ನಗಳನ್ನ ಎದುರಿಸಿ ಚಿತ್ರೀಕರಣ ಮುಗಿಸಿದೆ ಎಂದು ರಿಷಬ್‌ ಶೆಟ್ಟಿ ತಿಳಿಸಿದ್ದಾರೆ.

 


Spread the love

LEAVE A REPLY

Please enter your comment!
Please enter your name here