ಮಧ್ಯರಾತ್ರಿ 12:30ಕ್ಕೆ ಕರಗ ಶಕ್ತೋತ್ಸವಕ್ಕೆ ಚಾಲನೆ, ಯಾರ್ಯಾರು ಬರ್ತಾರೆ? – ಸಚಿವ ರಾಮಲಿಂಗಾರೆಡ್ಡಿ ಕೊಟ್ಟ ಮಾಹಿತಿ ಇಲ್ಲಿದೆ!

0
Spread the love

ಬೆಂಗಳೂರು:- ಮಧ್ಯರಾತ್ರಿ 12:30ಕ್ಕೆ ಕರಗ ಶಕ್ತೋತ್ಸವಕ್ಕೆ ಚಾಲನೆ ಸಿಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

Advertisement

ನಗರದಲ್ಲಿ ಮಾತನಾಡಿದ ಅವರು, ಕರಗ ಶಕ್ತೋತ್ಸವಕ್ಕೆ ಮಧ್ಯರಾತ್ರಿ 12:30ಕ್ಕೆ ಚಾಲನೆ ಸಿಗಲಿದೆ. ರಾಜ್ಯದ ಮುಖ್ಯಮಂತ್ರಿಗಳು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬರ್ತಾರೆ. ನಾನೇ ಬಂದು ಎಲ್ಲ ವ್ಯವಸ್ಥೆ ನೋಡಿದ್ದೀನಿ. ಬಹಳ ಚೆನ್ನಾಗಿ ಮಾಡಿದ್ದಾರೆ. ಎಲ್ಲರೂ ಕೂಡ ಕರಗದ ಯಶಸ್ವಿಗೆ ಶ್ರಮಿಸುತ್ತಿದ್ದಾರೆ. ಕರಗ ಅಂದ್ರೆ ಬಹಳ ಫೇಮಸ್. ಪುಟ್ಟ ನಗರವಾದಾಗಿನಿಂದಲೂ ಕರಗ ನಡೀತಾ ಬರ್ತಾ ಇದೆ. ಲಕ್ಷಾಂತರ ಜನರು ಕರಗ ನೋಡಲು ಬರ್ತಾರೆ. ಶಾಸಕರು, ಪೊಲೀಸ್, ಬಿಬಿಎಂಪಿ ಎಲ್ಲಾ ಅಧಿಕಾರಿ ವರ್ಗದವರು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.

ಕರಗ ಉತ್ಸವಕ್ಕೆ ಸರ್ಕಾರದಿಂದ ಹಣ ಬಿಡುಗಡೆ ಗೊಂದಲ ವಿಚಾರವಾಗಿ ಮಾತನಾಡಿ, ಸಮಿತಿ ಅವಧಿ ಮುಗಿದಿದೆ. ಸಮಿತಿ ಅಧ್ಯಕ್ಷರು ಕೋರ್ಟ್‌ಗೆ ಹೋಗಿ ಪರ್ಮಿಷನ್ ತಂದಿದ್ದಾರೆ. ಸರ್ಕಾರದ ನಿಯಮದ ಪ್ರಕಾರ ಅವರಿಗೆ ಹಣ ಕಳಿಸುವಂತಿರಲಿಲ್ಲ. ಹೀಗಾಗಿ, ಎಡಿಸಿ ಜಗದೀಶ್ ನಾಯ್ಕ್ಗೆ ಖಾತೆಗೆ ಹಣ ಹಾಕಿದ್ದೀವಿ. ಕೋರ್ಟ್ ಆದೇಶದ ಪ್ರಕಾರವೇ ಮಾಡಿದ್ದೇವೆ. ಎ ಗ್ರೇಡ್ ದೇವಾಸ್ಥಾನದ ಉಸ್ತುವಾರಿ ನಾನು ನೋಡ್ಕೋತೀನಿ. ಈ ದೇವಸ್ಥಾನ ಬಿ ಗ್ರೂಪ್‌ಗೆ ಬರುತ್ತಾರೆ. ಹೀಗಾಗಿ ಬಿ ಗ್ರೇಡ್ ದೇವಸ್ಥಾನದ ಉಸ್ತುವಾರಿ ಜಿಲ್ಲಾಧಿಕಾರಿಗಳು ನೋಡಿಕೊಳ್ತಾರೆ. ಈಗ ಎಲ್ಲ ಗೊಂದಲ ಬಗೆಹರಿದಿದೆ. ಎಲ್ಲ ಒಗ್ಗಟ್ಟಾಗಿ ಕೆಲಸ ಮಾಡ್ತಾ ಇದ್ದಾರೆ ಎಂದರು.


Spread the love

LEAVE A REPLY

Please enter your comment!
Please enter your name here