ವಿಜಯಸಾಕ್ಷಿ ಸುದ್ದಿ, ಗದಗ : ಕನ್ನಡ ನಾಮಫಲಕ ಕಡ್ಡಾಯ ವಿಚಾರವಾಗಿ ಜಿಲ್ಲಾಧಿಕಾರಿಗಳು ತುರ್ತು ಸಭೆ ಕರೆದು, ಗದಗ ನಗರ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗಡಿ ಮುಂಗಟ್ಟುಗಳು, ಜಾಹೀರಾತು ಫಲಕಗಳು ಶೇ. 60ರಷ್ಟು ಕನ್ನಡದಲ್ಲಿ ಇರುವಂತೆ ಆದೇಶಿಸಬೇಕೆಂದು ಕರವೇ ಜಿಲ್ಲಾಧ್ಯಕ್ಷ ಶರಣು ಎಸ್.ಗೋಡಿ ಆಗ್ರಹಿಸಿದ್ದಾರೆ.
Advertisement
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, 60-40 ಅನುಪಾತದಲ್ಲಿ ಶೇ.60ರಷ್ಟು ಕನ್ನಡದಲ್ಲಿ ದೊಡ್ಡದಾಗಿ ನಾಮಫಲಕ ಹಾಕಬೇಕೆಂಬ ಆದೇಶವಿದ್ದರೂ ಸಹ ಗದಗ ಜಿಲ್ಲೆಯಲ್ಲಿ ಕಾಟಾಚಾರಕ್ಕೆ ಆಂಗ್ಲ ಭಾಷೆಯ ಫಲಕ ಬಳಸಿಕೊಂಡಿದ್ದಾರೆ. ಇಂತವರಿಗೆ ನಗರಸಭೆ ಇತ್ತೀಚೆಗೆ ಕಾಟಾಚಾರಕ್ಕೆ ನೋಟಿಸ್ ಕೊಟ್ಟು ಸುಮ್ಮನೆ ಕೂತಿದ್ದಾರೆ. ತಕ್ಷಣ ಆಂಗ್ಲ ನಾಮಫಲಕಗಳನ್ನು ಹಾಗೂ ಜಾಹೀರಾತು ಫಲಕಗಳನ್ನು ಕಿತ್ತು ಹಾಕುವಂತೆ ಕರವೇ ಒತ್ತಾಯಿಸುತ್ತದೆ ಎಂದು ತಿಳಿಸಿದ್ದಾರೆ.