ಗದಗ:- ಬೆಳಗಾವಿಯಲ್ಲಿ ಮರಾಠಿ ಪುಂಡರ ಹಾವಳಿ ಖಂಡಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
Advertisement
ಅದರಂತೆ ಗದಗ ಜಿಲ್ಲೆಯಲ್ಲೂ ಜನಜೀವನ ಸಹಜ ಸ್ಥಿತಿಯಲ್ಲಿ ಸಾಗುತ್ತಿದ್ದು, ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿಸಿಲ್ಲ. ಗದಗನ ಪಂಡಿತ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣ ಎಂದಿನಂತೆ ಸಂಚಾರ ಇದ್ದು, ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ವಾಹನ ಸಂಚಾರ ಪ್ರಾರಂಭವಾಗಿದೆ.
ಆಟೋ, ಬೈಕ್, ಸಾರಿಗೆ, ಖಾಸಗಿ ಬಸ್ ಗಳ ಓಡಾಟ ಎಂದಿನಂತೆ ಇತ್ತು. ಬೆಳಗ್ಗೆಯಿಂದಲೇ ಜನರ ಓಡಾಟ, ಹೂ, ಹಣ್ಣು, ಹಾಲು ಮಾರಾಟ ಯಥಾಸ್ಥಿತಿ ಇದ್ದು, ಸದ್ಯ ಜಿಲ್ಲೆಯಲ್ಲಿ ಯಾವುದೇ ಬಂದ್ ಬಿಸಿ ಇಲ್ಲ ಎನ್ನಲಾಗಿದೆ.