ಬೆಂಗಳೂರು:- ರಾಜ್ಯದ ಜೈನ ಮಂದಿರಗಳ ಅರ್ಚಕರಿಗೆ ವೇತನ ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
Advertisement
ರಾಜ್ಯದಲ್ಲಿನ 1,043 ಜೈನ ಮಂದಿರಗಳ ಪ್ರಧಾನ ಅರ್ಚಕರಿಗೆ ತಲಾ 6 ಸಾವಿರ ರೂ., ಸಹಾಯಕ ಅರ್ಚಕರಿಗೆ ತಲಾ 5 ಸಾವಿರ ರೂ. ವೇತನ ನೀಡಲಾಗುವುದು. ಇದೇ ಮೊದಲ ಬಾರಿಗೆ ಜೈನ ಮಂದಿರಗಳ ವೇತನ ನಿಗದಿ ಸಂಬಂಧ ಬಜೆಟ್ ನಲ್ಲಿ ಘೋಷಿಸಲಾಗಿತ್ತು. ವೇತನಕ್ಕಾಗಿ ಇದುವರೆಗೂ ಜಿಲ್ಲೆಗಳಿಂದ 1,043 ಪ್ರಸ್ತಾವನೆ ಬಂದಿದ್ದು, ಸಚಿವ ಜಮೀರ್ ಅಹಮದ್ ಖಾನ್ ಅವರು ಎಲ್ಲ ಪ್ರಸ್ತಾವನೆಗೆ ಒಪ್ಪಿಗೆ ನೀಡಿ ಆದೇಶ ಹೊರಡಿಸಲು ಸೂಚನೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಬೆಂಗಳೂರು ಗಾಂಧಿ ನಗರದ ಮಹಾಬೋಧಿ ಸೊಸೈಟಿ ಅಭಿವೃದ್ಧಿ ಗೆ ಒಂದು ಕೋಟಿ ರೂ. ಬಿಡುಗಡೆ ಮಾಡಲು ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಆದೇಶ ಹೊರಡಿಸಿದರು.