ವಿಜಯಸಾಕ್ಷಿ ಸುದ್ದಿ, ಗದಗ : ಮಂಗಳವಾರ ಕೇಂದ್ರ ಸರ್ಕಾರ ಘೋಷಿಸಿದ ಬಜೆಟ್ ಕರ್ನಾಟಕ ನಿರ್ಲಕ್ಷಿತ ಬಜೆಟ್ ಆಗಿದ್ದು, ಚುನಾವಣಾ ಪ್ರಣಾಳಿಕೆ ಪಾಲಿಸಲಾಗದೆ `ಎನ್ನ ನಡೆಯೊಂದು ಪರಿ ಎನ್ನ ನುಡಿಯೊಂದು ಪರಿ’ ಎಂಬಂತೆ ಆಚರಣೆ ರಹಿತವಾಗಿದೆ ಎಂದು ಪ್ರೊ. ಶಕುಂತಲಾ ಚನ್ನಪ್ಪ ಸಿಂಧೂರ ಅಭಿಪ್ರಾಯಪಟ್ಟಿದ್ದಾರೆ.
ಸಮಾನತೆಯ ಮಾನವೀಯತೆ ವಂಚಿತವಾದುದು ಚಿಂತನಾರ್ಹ, ಖಂಡನಾರ್ಹ. ಮೂಗಿಗೆ ತುಪ್ಪ ಸವರದೆ ಕರ್ನಾಟಕಕ್ಕೆ ಆದ್ಯತೆ ಯಾವಾಗ ಎಂಬುದು ಮರೀಚಿಕೆಯಾಗಿರುವುದು ವಿಷಾದಕರ ಸಂಗತಿಯೇ ಸರಿ ಎಂದಿದ್ದಾರೆ.



