ಬೆಂಗಳೂರು:- ದೇಶದಲ್ಲಿರುವ ರಾಜ್ಯಪಾಲರ ನಿವಾಸಗಳಾದ ರಾಜ ಭವನಗಳ ಹೆಸರು ಅನ್ನು ಬದಲಾಯಿಸಿ, ಲೋಕ ಭವನ್ ಎಂದು ಹೊಸ ನಾಮಕರಣ ಮಾಡಲು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.
ಆ ಹಿನ್ನೆಲೆಯಲ್ಲಿ ಕರ್ನಾಟಕದ ರಾಜ್ಯಪಾಲರು ರಾಜಭವನದ ಹೆಸರನ್ನು ಬದಲಾವಣೆ ಮಾಡಿದ್ದು, ರಾಜಭವನವನ್ನು ಇನ್ನೂ ‘ಲೋಕ ಭವನ’ ಎಂದು ಮರುನಾಮಕರಣ ಮಾಡಲಾಗಿದೆ. ತಕ್ಷಣದಿಂದಲೇ ರಾಜಭವನದ ಎಲ್ಲ ಅಧಿಕೃತ ದಾಖಲೆಗಳು, ಸಂವಹನಗಳು ಮತ್ತು ಉಲ್ಲೇಖಗಳಲ್ಲಿ ಹೊಸ ಹೆಸರು ‘ಲೋಕ ಭವನ-ಕರ್ನಾಟಕ’ ಎಂದು ಬಳಸಬೇಕು. ಎಲ್ಲ ಇಲಾಖೆ ಮತ್ತು ಅಧಿಕಾರಿಗಳು ತಮ್ಮ ದಾಖಲೆಗಳು, ಲೆಟರ್‍ಹೆಡ್, ವೆಬ್‍ಸೈಟ್‍ಗಳು ಮತ್ತು ಇತರ ಸಂವಹನಗಳಲ್ಲಿ ಬದಲಾವಣೆಯನ್ನು ಮಾಡಬೇಕು ಎಂದು ಸೂಚನೆ ನೀಡಲಾಗಿದೆ.
ಮರುನಾಮಕರಣಕ್ಕೆ ಕಾರಣವೇನು?:
‘ರಾಜಭವನ’ ಎಂಬುದು ಬ್ರಿಟಿಷ್ ಶೈಲಿಯನ್ನು ಪ್ರತಿಬಿಂಬಿಸುತ್ತಿದ್ದು, ರಾಜ್ಯಪಾಲರ ಅಧಿಕಾರ, ವೈಭವ ಮತ್ತು ಆಡಳಿತದ ಶ್ರೀಮಂತಿಕೆಯನ್ನು ಸೂಚಿಸುತ್ತವೆ. ಆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಈ ಭವನಗಳನ್ನು ‘ಲೋಕಭವನ’ ಎಂದು ಮರುನಾಮಕರಣ ಮಾಡುವ ನಿರ್ಧಾರ ಕೈಗೊಂಡಿದೆ.


