ಕನ್ನಡ ಉಳಿಸುವುದು ಎಲ್ಲರ ಜವಾಬ್ದಾರಿ : ಆರ್.ಎಸ್. ಬುರಡಿ

0
Karnataka Rajyotsava and District Level Poetry Concert Program
Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಮನೋರಮಾ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘ ಗದಗ ಜಿಲ್ಲಾ ಘಟಕದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಹಾಗೂ ಜಿಲ್ಲಾ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಮಾತನಾಡಿ, ಶಾಲಾ ಮಕ್ಕಳ ಜೊತೆ ಮಾತನಾಡುವುದು ಸುಲಭ. ಆದರೆ ಸಾಹಿತಿಗಳು, ಬುದ್ಧಿಜೀವಿಗಳ ಎದುರಿಗೆ ಮಾತನಾಡಬೇಕಾದರೆ ಎಚ್ಚರಿಕೆಯಿಂದ ಮಾತನಾಡಬೇಕಾಗುತ್ತದೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕನ್ನಡ ಕಲಿಸಿ, ಕನ್ನಡ ಉಳಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.

Advertisement

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮನೋರಮಾ ಕಾಲೇಜ ಪ್ರಾಚಾರ್ಯ ಬಿ.ಎಸ್. ಹಿರೇಮಠ ಮಾತನಾಡಿ, ಕರ್ನಾಟಕ ಏಕೀಕರಣಕ್ಕೆ ಗದಗ ಜಿಲ್ಲೆಯ ಪಾತ್ರ ಬಹುದೊಡ್ಡದಾಗಿದೆ. ವಿಷೇಶವಾಗಿ ಆಲೂರ ವೆಂಕಟರಾಯರು, ಜಕ್ಕಲಿ ಗ್ರಾಮದ ಅಂದಾನಪ್ಪ ದೊಡ್ಡಮೇಟಿ, ಡಾ. ಎಚ್.ಎನ್. ಹೂಗಾರ, ಸಂಶಿ ಭೂಸನೂರಮಠ, ಡಾ. ಆರ್.ಸಿ. ಹಿರೇಮಠ, ಚನ್ನವೀರ ಕಣವಿ, ಸಾಕಷ್ಟು ಜನ ಕವಿಗಳು, ಕನ್ನಡ ಅಭಿಮಾನಿಗಳು ತ್ಯಾಗದ ಫಲದಿಂದ ಕರ್ನಾಟಕ ಎಂಬ ಹೆಸರು ಬಂದಿದೆ ಎಂದರು.

ಕಾರ್ಯಕ್ರಮ ಸಾನ್ನಿಧ್ಯ ವಹಿಸಿದ ಶ್ರೀ ಮ.ನಿ.ಪ್ರ. ಶಾಂತಲಿಂಗ ಸ್ವಾಮಿಗಳು ಮಾತನಾಡಿ, ಎಲ್ಲರೂ ಕನ್ನಡ ಉಳಿಸಿ-ಬೆಳಸಲು ಶ್ರಮವಹಿಸಿ. ಬರಹಗಾರರ ಸಂಘಟನೆ ಎಲ್ಲಾ ಪದಾಧಿಕಾರಿಗಳು ಕವಿಗೋಷ್ಠಿ ಹಮ್ಮಿಕೊಂಡಿರುವುದು ಸಂತಸದ ವಿಚಾರ ಎಂದರು.

ಅಧ್ಯಕ್ಷತೆಯನ್ನು ಬರಹಗಾರರ ಸಂಘದ ಗದಗ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ಕಲಾಶ್ರೀ ಹಾದಿಮನಿ ವಹಿಸಿದ್ದರು. ಈ ಸಂದರ್ಭದಲ್ಲಿ ಮನೋರಮಾ ಕಾಲೇಜ್ ಚೇರಮನ್ ಎನ್.ಎಮ್. ಕುಡತರಕರ, ಆಡಳಿತಾಧಿಕಾರಿಗಳಾದ ಕಿಶೋರ ಮುದಗಲ್ಲ, ಪ್ರೊ. ಶರಣು ಪೂಜಾರ, ಶರಣ ಸಾಹಿತ್ಯ ಪರಿಷತ್ತ ಜಿಲ್ಲಾಧ್ಯಕ್ಷರಾದ ಕೆ.ಎ. ಬಳಿಗಾರ, ಸಾಹಿತಿ ಆಡಿನ, ಗುರುಗಳಾದ ಜೋಗಿನ, ಜ್ಯೋತಿ, ಸಾಹಿತಿಗಳಾದ ಬಸವರಾಜ ಕ್ಯಾರಕೊಪ್ಪ, ಈಶ್ವರ ಕುರಿ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here