HomeEntertainmentಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ರಕ್ಷಿತ್ ಶೆಟ್ಟಿ ಅತ್ಯುತ್ತಮ ನಟ, ಅರ್ಚನಾ ಅತ್ಯುತ್ತಮ ನಟಿ

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ರಕ್ಷಿತ್ ಶೆಟ್ಟಿ ಅತ್ಯುತ್ತಮ ನಟ, ಅರ್ಚನಾ ಅತ್ಯುತ್ತಮ ನಟಿ

For Dai;y Updates Join Our whatsapp Group

Spread the love

2021ನೇ ಸಾಲಿನ ಕರ್ನಾಟಕ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ರಕ್ಷಿತ್ ಶೆಟ್ಟಿ ಅತ್ಯುತ್ತಮ ನಟ, ಅರ್ಚನಾ ಜೋಯ್ಸ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

777 ಚಾರ್ಲಿ ಸಿನಿಮಾದ ನಟನೆಗೆ ರಕ್ಷಿತ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ, ಮ್ಯೂಟ್ ಸಿನಿಮಾದ ನಟನೆಗಾಗಿ ಅರ್ಚನಾ ಜೋಯ್ಸ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ದಿವಂಗತ ಪುನೀತ್ ರಾಜ್‌ಕುಮಾರ್ ನಟಿಸಿರುವ ‘ಯುವರತ್ನ’ ಸಿನಿಮಾಗೆ ‘ಶ್ರೇಷ್ಠ ಮನರಂಜನಾ ಚಿತ್ರ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇನ್ನೂ ದೊಡ್ಡಹಟ್ಟಿ ಬೋರೇಗೌಡ ಸಿನಿಮಾಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಘೋಷಣೆ ಮಾಡಲಾಗಿದೆ. 777 ಚಾರ್ಲಿ ಸಿನಿಮಾಗೆ 2ನೇ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಹಾಗೂ ಬಿಸಿಲು ಕುದುರೆ ಸಿನಿಮಾಗೆ 3ನೇ ಅತ್ಯುತ್ತಮ ಸಿನಿಮಾ ಪ್ರಶಸ್ತಿ ದೊರೆತಿದೆ.

  • ರತ್ನನ್ ಪ್ರಪಂಚ ಸಿನಿಮಾದ ನಟನೆಗೆ ಪ್ರಮೋದ್​ಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ
  • ಪುನೀತ್ ರಾಜ್‍ಕುಮಾರ್ ನಟನೆಯ ಯುವರತ್ನ ಸಿನಿಮಾಗೆ ಅತ್ಯುತ್ತಮ ಜನಪ್ರಿಯ ಮನರಂಜನಾ ಸಿನಿಮಾ ಪ್ರಶಸ್ತಿ
  • ವಿಶೇಷ ಕಳಕಳಿ ಚಿತ್ರ- ಭಾರತದ ಪ್ರಜೆಗಳಾದ ನಾವು
  • ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ- ನಾಡಪದ ಆಶಾ (ಕೊಡವ)
  • ಅತ್ಯುತ್ತಮ ಮಕ್ಕಳ ಚಿತ್ರ- ಕೇಕ್
  • ಅತ್ಯುತ್ತಮ ಹಿನ್ನೆಲೆ ಗಾಯಕ- ಅಜನೀಶ್ ಕೇಶವರಾವ್
  • ಅತ್ಯುತ್ತಮ ಹಿನ್ನೆಲೆ ಗಾಯಕಿ- ಸಹನಾ ಭಾರದ್ವಾಜ್
  • ಅತ್ಯುತ್ತಮ ಪೋಷಕ ನಟಿ- ಉಮಾಶ್ರೀ (ಚಿತ್ರ- ರತ್ನನ್ ಪ್ರಪಂಚ)
  • ಅತ್ತ್ಯುತ್ತಮ ಗೀತ ರಚನೆ- ನಾಗಾರ್ಜುನ ಶರ್ಮಾ (ಚಿತ್ರ- 777 ಚಾರ್ಲಿ)
  • ಅತ್ಯುತ್ತಮ ಸಂಕಲನ- ಪ್ರತೀಕ್ ಶೆಟ್ಟಿ (ಚಿತ್ರ- 777 ಚಾರ್ಲಿ)
  • ಅತ್ಯುತ್ತಮ ಸಂಗೀತ ನಿರ್ದೇಶಕ- ಇಮ್ತಿಯಾಜ್ ಸುಲ್ತಾನ್ (ಚಿತ್ರ- ಬಿಸಿಲು ಕುದುರೆ)
  • ಅತ್ಯುತ್ತಮ ಬಾಲನಟಿ- ಬೇಬಿ ಭೈರವಿ (ಚಿತ್ರ- ಭೈರವಿ)
  • ಅತ್ಯುತ್ತಮ ಬಾಲನಟ- ಮಾಸ್ಟರ್ ಅತೀಶ್ ಶೆಟ್ಟಿ (ಚಿತ್ರ- ಕೇಕ್)
  • ಉತ್ತಮ ಕಲಾ ನಿರ್ದೇಶಕ- ರವಿ ಸಂತೇಹಕ್ಲು (ಚಿತ್ರ- ಭಜರಂಗಿ-2)
  • ಅತ್ಯುತ್ತಮ ಚೊಚ್ಚಲ ನಿರ್ದೇಶನ- ಶಂಕರ್ ಗುರು (ಚಿತ್ರ- ಬಡವ ರಾಸ್ಕಲ್)
  • ಅತ್ಯುತ್ತಮ ನಿರ್ಮಾಣ ನಿರ್ವಾಹಕ- ಶಿವಕುಮಾರ್ ಎಸ್​. (ಪೊಗರು)
  • ಅತ್ಯುತ್ತಮ ಛಾಯಾಗ್ರಹಣ- ಭುನವೇಶ್ ಪ್ರಭು (ಆಮ್ಚಿ ಸಂಸಾರ- ಕೊಂಕಣಿ)
  • ಅತ್ಯುತ್ತಮ ಚಿತ್ರಕಥೆ- ರಘು ಕೆ.ಎಂ (ದೊಡ್ಡ ಹಟ್ಟಿ ಬೋರೆಗೌಡ)
  • ಅತ್ಯುತ್ತಮ ಕಥೆ- ಮಂಜುನಾಥ್ ಮುನಿಯಪ್ಪ (9 ಸುಳ್ಳು ಕಥೆಗಳು)

Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!