ಫಂಡರಾಪುರಕ್ಕೆ ಕಾರ್ತಿಕ ದಿಂಡಿ ಪಾದಯಾತ್ರೆ

0
Kartika Dindi Trek to Phandarapur
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಸಮೀಪದ ದಕ್ಷಿಣ ಕಾಶಿ ಜಲಾಶಂಕರದಲ್ಲಿ ನೂತನವಾಗಿ ಪ್ರತಿಷ್ಠಾಪನೆಗೊಂಡ ಪಾಂಡುರಂಗ ರುಕ್ಮಾಯಿ ಜ್ಞಾನದೇವ ತುಕಾರಾಮರ ಮೂರ್ತಿಗೆ ಮಹಾರುದ್ರಾಭೀಷೇಕ, ಕಾಕಡಾರತಿ, ಹರಿನಾಮ ಭಜನೆ, ಮಂಗಳಾರತಿ ಅದ್ದೂರಿಯಾಗಿ ನಡೆಯಿತು.

Advertisement

ಈ ಭಕ್ತಿ ಸೇವೆಯನ್ನು ನಿವೃತ್ತ ಪಿಎಸ್‌ಐ ಹೆಚ್.ಡಿ. ಪವಾರ ಕುಟುಂಬದವರು ವಹಿಸಿಕೊಂಡಿದ್ದರು. ಪೂಜಾ ಕಾರ್ಯಕ್ರಮವು ಶಿವಾನಂದ ಮಹಾರಾಜರ ನೇತೃತ್ವದಲ್ಲಿ ಜರುಗಿತು. ಜಲಾಶಂಕರ ಅರ್ಚಕರಾದ ಮಲ್ಲಯ್ಯಸ್ವಾಮಿ ಅಂಗಡಿ (ಹಿರೇಮಠ)ರವರು ಪೂಜಾ ಕಾರ್ಯಕ್ರಮವನ್ನು ಅತ್ಯಂತ ಅದ್ದೂರಿಯಾಗಿ ಸಕಲ ವಿಧಿವಿಧಾನಗಳಿಂದ ಜರುಗಿಸಿದರು.

ಸಾಯಂಕಾಲ 4 ಗಂಟೆಗೆ ದಿಂಡಿಪಾದಯಾತ್ರೆಯು ಶ್ರೀ ಫಂಡರಪುರಕ್ಕೆ ಪ್ರಯಾಣ ಬೆಳೆಸಿತು. ಲಕ್ಷ್ಮಣ ಸಂತರು ಕಳಸಾಪೂರ, ಸೋಮನಾಥ ಹವಾಲ್ದಾರ, ಸಂಗಪ್ಪ ಗೆದ್ದಲಮನಿ, ಗುರುನಾಥ ಸಂತರು, ಯಮನಪ್ಪ ಹಿರೇಬೂದಿಹಾಳ, ಯಮನಪ್ಪ ಕಳಸಾಪೂರ, ಸೇರಿದಂತೆ ಅನೇಕ ಸಂತರು, ಭಕ್ತಾಧಿಗಳು ಈ ದಿಂಡಿಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಈ ಎಲ್ಲ ಭಕ್ತಾಧಿಗಳಿಗೆ ಪ್ರಸಾದ ಸೇವೆಯನ್ನು ಹೆಚ್.ಡಿ. ಪವಾರ ಹಾಗೂ ಕುಟುಂಬದವರು ನೆರವೇರಿಸಿದರು.


Spread the love

LEAVE A REPLY

Please enter your comment!
Please enter your name here