ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಹಳೇ ಸರಾಫ ಬಜಾರ ಕರೂಗಲ್ ಓಣಿಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶ್ರೀ ಸಾಯಿ ಸೇವಾ ಸಮಿತಿ ವತಿಯಿಂದ ಶ್ರೀ ಕಾರ್ತಿಕ ದಿಪೋತ್ಸವ ಜರುಗಿತು.
ಕಾರ್ಯಕ್ರಮದವನ್ನು ನಗರಸಭಾ ಸದಸ್ಯ ನಾಗರಾಜ ಹುಲಿಗೇಪ್ಪ ತಳವಾರ ಉದ್ಘಾಟಿಸಿ ಮಾತನಾಡಿ, ದೀಪದ ಬೆಳಕಿನಂತೆ ಮನುಷ್ಯನ ಭಾವನೆಗಳು ಪರಿಶುದ್ಧವಾಗಿರಲಿ. ದೀಪ ಎಲ್ಲರನ್ನೂ ಒಗ್ಗೂಡಿಸುವ, ಭಾಂದವ್ಯ ಬೆಸೆಯುವ ಚೈತನ್ಯ ಶಕ್ತಿ ಹೊಂದಿದೆ. ಮನುಷ್ಯನಲ್ಲಿನ ಕತ್ತಲೆಯನ್ನು ತೊಡೆದು ಹೊಸ ಬೆಳಕನ್ನು ನೀಡುವ ಸಂಕೇತವಾದ ಇಂತಹ ಪವಿತ್ರ ಆಚರಣೆಗಳಿಗೆ ಅತ್ಯಂತ ಮಹತ್ವದ ಸ್ಥಾನವಿದೆ ಎಂದು ಹೇಳಿದರು.
28ನೇ ವಾರ್ಡ್ನ ನಗರಸಭಾ ಸದಸ್ಯ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಅಬ್ಬಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂಧರ್ಭದಲ್ಲಿ ಸಮಿತಿಯ ಅಧ್ಯಕ್ಷ ಸಂತೋಷ ಕಬಾಡರ, ಕಾರ್ಯದರ್ಶಿ ಮಂಜುನಾಥ ಮಜ್ಜಿಗುಡ್ಡ, ಸಹಕಾರ್ಯದರ್ಶಿ ಸುನೀಲ್ ಮುಳ್ಳಾಳ, ಖಜಾಂಚಿ ಮಹೇಶ ಕೋರಿ, ಹಿರಿಯರಾದ ವಿಜಯಕುಮಾರ ಕಬಾಡರ್, ಈಶಪ್ಪ ಕರೂಗಲ್, ಸಮಿತಿಯ ಸದ್ಯರಾದ ಬಾಬು ಸುಲಾಖೆ, ಮಂಜುನಾಥ ಕರೂಗಲ್, ಅನಿಲ್ ಮುಳ್ಳಾಳ, ಸುರೇಶ ಚಿತ್ರಗಾರ, ಪ್ರವೀಣ ವಾರಕರ್, ಅಪ್ಪು ಕೊಟ್ಟಗಿ, ಅಪ್ಪು ಅಬ್ಬಿಗೇರಿ, ಪ್ರಸಾದ ಅಬ್ಬಿಗೇರಿ, ಸಂದೀಪ ಪುಣೇಕರ್, ಕೇದಾರ ಅಬ್ಬಿಗೇರಿ, ವಿಶಾಲ ಶಿದ್ಲಿಂಗ್ ಇದ್ದರು. ಪ್ರಸಾದ ಸೇವೆಯನ್ನು ಮಲ್ಲು ಚಿಂಚಲಿ ನೇರವೆರಿಸಿದರು.


