ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ಕಾಶೀ ವಿಶ್ವನಾಥ ನಗರದ (ಬುಳ್ಳಾ ಪ್ಲಾಟ್) ಶ್ರೀ ಕಾಶೀ ವಿಶ್ವನಾಥ ರಥೋತ್ಸವ ಹಾಗೂ ಜಗನ್ಮಾತೆ ಶ್ರೀ ದುರ್ಗಾದೇವಿಗೆ ಉಡಿ ತುಂಬುವ ಕಾರ್ಯಕ್ರಮ, ಸಾಮೂಹಿಕ ವಿವಾಹ, ಧರ್ಮಸಭೆ, ಮಹಾರಥೋತ್ಸವ, ಸನ್ಮಾನ, ಜಾನಪದ- ರಸಮಂಜರಿ ಕಾರ್ಯಕ್ರಮಗಳು ಆ. 22ರಿಂದ 24ರವರೆಗೆ ಜರುಗಲಿವೆ.
ಆ. 22ರಂದು ಬೆಳಿಗ್ಗೆ 6 ಗಂಟೆಗೆ ಕಾಶೀ ವಿಶ್ವನಾಥನಿಗೆ ಅಭಿಷೇಕ, ದುರ್ಗಾದೇವಿಗೆ ಉಡಿ ತುಂಬುವ ಕಾರ್ಯಕ್ರಮ, ಮಧ್ಯಾಹ್ನ 12 ಗಂಟೆಗೆ 33ನೇ ವರ್ಷದ ಸಾಮೂಹಿಕ ವಿವಾಹ-ಧರ್ಮಸಭೆ ಜರುಗುವದು.
ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೂಜ್ಯ ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸುವರು. ಅಧ್ಯಕ್ಷತೆಯನ್ನು ಜಾತ್ರಾ ಸಮಿತಿ ಅಧ್ಯಕ್ಷ ವೆಂಕಟೇಶ ಪೂಜಾರ ವಹಿಸುವರು. ಮುಖ್ಯ ಅತಿಥಿಗಳಾಗಿ ವಿ.ಪ ಸದಸ್ಯ ಎಸ್.ವ್ಹಿ. ಸಂಕನೂರ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ಗಣ್ಯರಾದ ಸಿದ್ಧಲಿಂಗಪ್ಪ ಮಾನ್ವಿ, ಎಂ.ಎಸ್. ಕರಿಗೌಡ್ರ, ವಿರೂಪಾಕ್ಷಪ್ಪ ರಾಮಗಿರಿ, ದುಂಡಪ್ಪ ಆಸಂಗಿ ಆಗಮಿಸುವರು.
ಅತಿಥಿಗಳಾಗಿ ಗಣ್ಯರಾದ ಬಿ.ಬಿ. ಅಸೂಟಿ, ಲಲಿತಾ ಅಸೂಟಿ, ಶಾಂತಪ್ಪ ಮುಳವಾಡ, ಬಸನಗೌಡ ಪಾಟೀಲ, ಮಹೇಶ ಸುಂಕದ, ಮಂಜುನಾಥ ಮಡಿವಾಳರ, ರಮೇಶ ಅಣ್ಣಿಗೇರಿ, ದೇವಪ್ಪ ಮಳಗಿ, ಶೇಖಪ್ಪ ಮುಳವಾಡ, ದಾವಲಸಾಬ ರೋಣದ ಆಗಮಿಸುವರು. ಮಧ್ಯಾಹ್ನ 1 ಗಂಟೆಗೆ ಪೂಜ್ಯ ಕಲ್ಲಯ್ಯಜ್ಜನವರು ಮಹಾ ಅನ್ನಸಂತರ್ಪಣೆಗೆ ಚಾಲನೆ ನೀಡುವರು. ಸಂಜೆ 6 ಗಂಟೆಗೆ ಶ್ರೀ ಕಾಶೀ ವಿಶ್ವನಾಥ ರಥೋತ್ಸವ ಜರುಗುವದು.
ಆ. 23ರಂದು ಸಂಜೆ 4 ಗಂಟೆಗೆ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಯುವಕರಿಗೆ ಕ್ರೀಡೆಗಳು, ಸಂಜೆ 7 ಗಂಟೆಗೆ ಸನ್ಮಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಾನಪದ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪಾರಿತೋಷಕ ವಿತರಣೆ ಜರುಗುವದು. ಸಾನ್ನಿಧ್ಯವನ್ನು ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದ ಪೂಜ್ಯ ಶಾಂತಲಿಂಗ ಮಹಾಸ್ವಾಮಿಗಳು ವಹಿಸುವರು. ಅಧ್ಯಕ್ಷತೆಯನ್ನು ಜಾತ್ರಾ ಸಮಿತಿಯ ಅಧ್ಯಕ್ಷ ವೆಂಕಟೇಶ ಪೂಜಾರ ವಹಿಸುವರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಶಾಸಕ ಜಿ.ಎಸ್. ಪಾಟೀಲ, ಜಿಲ್ಲಾಧಿಕಾರಿ ಎಂ.ಎನ್. ಶ್ರೀಧರ, ಗಣ್ಯರಾದ ಪ್ರಭು ಬುರಬುರೆ, ಪರಪ್ಪ ಉಮಚಗಿ, ದುಂಡಪ್ಪ ಆಸಂಗಿ, ಬಿ.ಬಿ. ಅಸೂಟಿ, ಲಲಿತಾ ಅಸೂಟಿ, ಶಾಂತಪ್ಪ ಮುಳವಾಡ, ಜ್ಯೋತಿ ಇರಾಳ, ಬಸನಗೌಡ ಪಾಟೀಲ, ಮಹೇಶ ಸುಂಕದ, ಮಂಜುನಾಥ ಮಡಿವಾಳರ, ಚನ್ನವೀರಪ್ಪ ಮಳಗಿ, ರಮೇಶ ಅಣ್ಣಿಗೇರಿ ಆಗಮಿಸುವರು. ಆರ್.ಎಸ್. ಕಾಶೀಗೌಡ್ರ, ವ್ಹಿ.ಎಸ್. ಅಮರಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು.
ಮುಖ್ಯ ಅತಿಥಿಗಳಾಗಿ ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಶಾಸಕ ಡಿ.ಆರ್. ಪಾಟೀಲ ಆಗಮಿಸುವರು. ಅತಿಥಿಗಳಾಗಿ ಎಸ್‌ಪಿ ರೋಹನ ಜಗದೀಶ, ಪೌರಾಯುಕ್ತ ರಾಜಾರಾಮ ಪವಾರ, ಗಣ್ಯರಾದ ದುಂಡಪ್ಪ ಆಸಂಗಿ, ಶಾಂತಣ್ಣ ಮುಳವಾಡ, ಶರಣಬಸಪ್ಪ ಗುಡಿಮನಿ, ಸಂತೋಷ ಚನ್ನಪ್ಪನವರ, ಬಸವರಾಜ ಬಳ್ಳಾರಿ, ವಿರೂಪಾಕ್ಷಪ್ಪ ರಾಮಗಿರಿ, ಎಂ.ಜಿ. ಸಂತೋಜಿ, ಹರೀಶ ಪೂಜಾರ, ಬಸನಗೌಡ ಪಾಟೀಲ, ಮಹೇಶ ಸುಂಕದ, ಮಂಜುನಾಥ ಮಡಿವಾಳರ ಆಗಮಿಸುವರು ಎಂದು ಚನ್ನವೀರ ಮಳಗಿ, ಶಾಂತಪ್ಪ ಅಕ್ಕಿ ತಿಳಿಸಿದ್ದಾರೆ.
ಆ. 24ರಂದು ಸಂಜೆ 6 ಗಂಟೆಗೆ ಸನ್ಮಾನ ಹಾಗೂ ರಸಮಂಜರಿ ಕಾರ್ಯಕ್ರಮವಿದ್ದು, ಸಾನ್ನಿಧ್ಯವನ್ನು ನರಗುಂದ ಪಂಚಗ್ರಹ ಗುಡ್ಡದ ಹಿರೇಮಠದ ಪೂಜ್ಯ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸುವರು. ಅಧ್ಯಕ್ಷತೆಯನ್ನು ಜಾತ್ರಾ ಸಮಿತಿಯ ಅಧ್ಯಕ್ಷ ವೆಂಕಟೇಶ ಪೂಜಾರ ವಹಿಸುವರು.