ವಿಜಯಸಾಕ್ಷಿ ಸುದ್ದಿ, ಗದಗ: ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಗದುಗಿನ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಏರ್ಪಡಿಸಿದ್ದ ಕಾಶಿ ವಿಶ್ವನಾಥ ದರ್ಶನ ಭಕ್ತಾದಿಗಳನ್ನು ಆಕರ್ಷಿಸಿತು.
ಕಾಶಿ ವಿಶ್ವನಾಥ ದರ್ಶನದ ಮಹಾದ್ವಾರವನ್ನು ಪ್ರವೇಶಿಸಿದಂತೆಯೇ ಪ್ರದಕ್ಷಣೆ ಲಿಂಗು ದರ್ಶನವು ಭಕ್ತರ ಹೃದಯ ಅರಳಿತು. ಮಹಾಶಿವರಾತ್ರಿಯ ಪುಣ್ಯ ದಿನದಂದು ಒಂದೇ ದಿನದಲ್ಲಿ ದ್ವಾದಶ ಜ್ಯೋತಿರ್ಲಿಂಗ ದರ್ಶಿಸಿ ಆಶೀರ್ವಾದ ಪಡೆದ ಭಕ್ತರ ಹೃದಯ ತಣಿಯಿತು.
ಈ ವೈವಿಧ್ಯಮಯ ಮಂಟಪವನ್ನು ಚಂದ್ರು ಬಾಳೇಹಳ್ಳಿಮಠ, ಪ್ರಸನ್ನ ಕುಮಾರ ಶಾಬಾದಿಮಠ, ಮೃತ್ಯುಂಜಯ ಸಂಕೇಶ್ವರ, ವಿನೀತ್ ಕುಮಾರ್ ಜಗತಾಪ ಮುಂತಾದವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ರವೀಂದ್ರ ಹೊನ್ನಗುಡಿ, ರಾಜು ಕಾಟೀಗರ, ಪ್ರದೀಪ್ ಕಟೀಗಾರ್, ವಿರುಪಾಕ್ಷಿ, ಸಿದ್ಲಿಂಗೇಶ್ ಅಂಗಡಿ, ವಿರುಪಾಕ್ಷಿ ಶಿದ್ಲಿಂಗ್, ಟಿ.ಎನ್. ಕಲಬುರ್ಗಿ, ಕಿರಣ್ ಕಾಟೀಗರ, ರಾಜಶೇಖರ ಕೆ, ಎಸ್.ಎನ್. ಮುನ್ಶಿ, ನಾರಾಯಣ ರಾಜಪುತ್, ಅನಿಲ್ ಮುಳಗುಂದ, ಗಂಗಾಧರ ಮುಳಗುಂದ, ಸಂಕೇತ್ ದಂಡಿನ್, ಸಂಧ್ಯಾ ಕಟವಟೆ, ರೇಣುಕಾ ಪ್ರಸಾದ್ ಹಿರೇಮಠ, ಕಮಲಾಕರ್ ರಂಗಾಪುರ್, ಯೋಗೇಶ್ ಶಿದ್ಲಿಂಗ್, ಸಾವಳಾರಾಮ್, ಅಮೃತ್ ಖೋಡೆ, ಪ್ರಮೋದ್ ಅರಸಿದ್ದಿ, ಚನ್ನಯ್ಯಾ ಸವದತ್ತಿಮಠ, ಕೃಷ್ಣಾ ಶಿದ್ಲಿಂಗ್, ಸೂರಜ್ ಕಟವಟೆ, ರವಿ ಶಿದ್ಲಿಂಗ್, ನಂದಿನಿ ಶಾಬಾದಿಮಠ್, ವೆಂಕಟೇಶ್ ಹಬೀಬ ಮುಂತಾದವರು ಪಾಲ್ಗೊಂಡಿದ್ದರು.
ಶಿವರಾತ್ರಿ ರಹಸ್ಯದ ಕುರಿತು ರಾಜಯೋಗಿನಿ ಬ್ರಹ್ಮಾಕುಮಾರಿ ಜಯಂತಿ ಅಕ್ಕನವರು ಮಾತನಾಡಿದರು. ಮಹೇಶ ಜಿ.ಕೆರಿ, ಜಗತಾಪ, ಜಯದೇವ್ ಮೆಣಸಿಗಿ ಮುಂತಾದವರು ಮಾತನಾಡಿದರು. ಬ್ರಹ್ಮಾಕುಮಾರಿ ರೇಖಾ ಸ್ವಾಗತಿಸಿದರು, ಬ್ರಹ್ಮಾಕುಮಾರಿ ಸಾವಿತ್ರಿ ನಿರೂಪಿಸಿದರು.