42ನೇ ವಯಸ್ಸಿಗೆ ಅಮ್ಮನಾದ ಕತ್ರೀನಾ ಕೈಫ್

0
Spread the love

ಬಾಲಿವುಡ್ ಸ್ಟಾರ್ ದಂಪತಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ತಮ್ಮ ಮೊದಲ ಮಗುವನ್ನು ನವೆಂಬರ್ 7, 2025 ರಂದು ಸ್ವಾಗತಿಸಿದ್ದಾರೆ. ತಮ್ಮ ಜೀವನದಲ್ಲಿ ಪತಿ-ಪತ್ನಿಯಾಗಿ ಇದ್ದ ಈ ಜೋಡಿ ಈಗ ಅಪ್ಪ-ಅಮ್ಮ ಎಂಬ ಹೊಸ ಜವಾಬ್ದಾರಿಯನ್ನು ಎದುರಿಸುತ್ತಿದ್ದಾರೆ.

Advertisement

ಇಬ್ಬರೂ ಇನ್‌ಸ್ಟಾಗ್ರಾಂನಲ್ಲಿ ಜಂಟಿ ಪೋಸ್ಟ್ ಮೂಲಕ ಅಭಿಮಾನಿಗಳಿಗೆ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ನಮ್ಮ ಸಂತೋಷದ ಮೂಟೆ ಬಂದಿದೆ. ಅಪಾರ ಕೃತಜ್ಞತೆಯಿಂದ, ನಾವು ನಮ್ಮ ಗಂಡು ಮಗುವನ್ನು ಸ್ವಾಗತಿಸುತ್ತೇವೆ. ನವೆಂಬರ್ 7, 2025. – ಕತ್ರಿನಾ ಮತ್ತು ವಿಕ್ಕಿ” ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಸೆಪ್ಟೆಂಬರ್ 23 ರಂದು ಈ ಜೋಡಿ ತಮ್ಮ ಮೊದಲ ಮಗುವಿನ ನಿರೀಕ್ಷೆಯನ್ನು ಘೋಷಿಸಿದ್ದರು. ತಮ್ಮ ಜೀವನದ ಈ ಅಧ್ಯಾಯವನ್ನು “ಅತ್ಯುತ್ತಮ ಅಧ್ಯಾಯ” ಎಂದು ಅಭಿಪ್ರಾಯಪಟ್ಟಿದ್ದರು. ಪೋಸ್ಟ್ ಜೊತೆ ವಿಕ್ಕಿ ಕತ್ರಿನಾಳ ಮಗುವಿನ ಬಂಪ್ ಅನ್ನು ಮುದ್ದಿಸುತ್ತಿರುವ ಫೋಟೋ ಹಂಚಿಕೊಂಡಿದ್ದರು.

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಡಿಸೆಂಬರ್ 2021 ರಲ್ಲಿ ರಾಜಸ್ಥಾನದಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಕೆಲವು ತಿಂಗಳುಗಳ ಹಿಂದೆ, ಕತ್ರಿನಾ ಕೈಫ್ ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು, ಸಂತಾನಕ್ಕಾಗಿ ವಿಶೇಷ ಕೋರಿಕೆ ಮಾಡಿದ್ದರು. ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು ಸರ್ಪ ದೋಷ ಮತ್ತು ಸಂತಾನ ದೋಷ ನಿವಾರಣೆಗೆ ಪ್ರಸಿದ್ಧವಾಗಿದೆ. ಭಕ್ತರ ನಂಬಿಕೆಯ ಪ್ರಕಾರ, ಇಲ್ಲಿಗೆ ಭೇಟಿ ನೀಡಿದರೆ ಸಂತಾನಕ್ಕೆ ಅಡ್ಡಿಯಾದ ಎಲ್ಲಾ ದೋಷಗಳು ನಿವಾರಣೆಯಾಗುತ್ತವೆ.

 


Spread the love

LEAVE A REPLY

Please enter your comment!
Please enter your name here