ಗಣೇಶ ಪವಾರರಿಗೆ ‘ಕಾಯಕ ರತ್ನ’ ಪ್ರಶಸ್ತಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ ಜಿಲ್ಲಾ ಮತ್ತು ತಾಲೂಕು ಘಟಕ ಕೊಪ್ಪಳ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನೀಯರಿಗೆ ‘ಕಾಯಕ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.

Advertisement

ಈ ಪ್ರಶಸ್ತಿಗೆ ಶ್ರೀ ಶ್ರೀ ಬ್ರ.108 ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು, ಎನ್.ತಿಮ್ಮಪ್ಪ, ಮಾ.ಚಿ. ಕೃಷ್ಣ, ರಮೇಶ್ ಸುರ್ವೆ, ಡಾ. ರಾಜೇಂದ್ರ ಗಡಾದ್, ದತ್ತು ಕಮ್ಮಾರ್, ರುದ್ರಮ್ಮ ಹಾಸಿನಳ, ಅಬ್ದುಲ್ ಬೀದರಕುಂದಿ, ವಿಜಯಕುಮಾರ ಕವಲೂರ, ವೈ.ಎಚ್. ಹಳ್ಳಿಕೇರಿ, ಚಂದ್ರಶೇಖರಯ್ಯ ರೋಣದ ಮಠ, ಹಲ್ಯಾ ನಾಯಕ, ಸೊ.ದಾ. ವಿರೂಪಾಕ್ಷಿ ಗೌಡ್ರು, ಡಾ. ನಾಗರಾಜ್ ಹೀರಾ, ಬಸವರಾಜ್ ದೇವರಮನಿ, ರುದ್ರಪ್ಪ ಬಂಡಾರಿ, ಬಸವರಾಜ ಉಪ್ಪಿನ, ಅಪ್ಪಾಜಿ ಎಸ್.ಡಿ, ಮಾದೇವಪ್ಪ ವಿಶ್ವಕರ್ಮ, ಮಹಾಬಲೇಶ್ವರ ಶಾಸ್ತ್ರಿಗಳು, ಮಾಂತಯ್ಯ ಶಾಸ್ತ್ರಿ, ರಾಘವೇಂದ್ರ ಅರಿಕೇರಿ, ಗಣೇಶ್ ಪವಾರ್, ಸುನಿತಾ ವಾದಿರಾಜ ಪಾಟೀಲ್, ಬಸವಲಿಂಗಯ್ಯ ಹಿರೇಮಠ, ಅನುಸೂಯ ಜಾಗೀರದಾರ, ಕಿಶನ್ ರಾವ್ ಕುಲಕರ್ಣಿ, ಮಹೇಶ್ ಮನ್ನಾಪುರ, ಗಾಳೆಪ್ಪ ಹಿರೇಮನಿ ಇವರುಗಳು ಆಯ್ಕೆ ಆಗಿದ್ದಾರೆ.

ಮಾ. 1ರಂದು ಕೊಪ್ಪಳದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜರುಗುವ ಜಿಲ್ಲಾ ಘಟಕ ಉದ್ಘಾಟನಾ ಸಮಾರಂಭದಲ್ಲಿ ‘ಕಾಯಕ ರತ್ನ’ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಕೊಪ್ಪಳ ಜಿಲ್ಲಾ ಅಧ್ಯಕ್ಷ ಜಿ.ಎಸ್. ಗೋನಾಳ, ಪ್ರಧಾನ ಕಾರ್ಯದರ್ಶಿ ಡಾ. ಶಿವಬಸಪ್ಪ ಮಸ್ಕಿ, ಅಧ್ಯಕ್ಷರಾದ ಮೈಲಾರಪ್ಪ ಉಂಕಿ ಮತ್ತು ಪ್ರಧಾನ ಕಾರ್ಯದರ್ಶಿ ಸುರೇಶ್ ಕುಂಬಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here