ಕಾಯಕ, ಕಲೆಗಳಿಗೆ ಲಿಂಗದ ಹಂಗಿಲ್ಲ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಮಂಗಳಮುಖಿಯರ ಜೀವನದ ತಲ್ಲಣಗಳು ಬಡತನ, ಸಿರಿತನ ಭವಿಷ್ಯದ ಭಯವಿಲ್ಲದೆ ಭಾವನೆಗಳಿಗೆ ಬಣ್ಣ ತುಂಬಿ, ನಾರಿಯರ ಅಂಗದ ಅಭಿನಯದಲ್ಲಿ ಗುರುತಿಸಿಕೊಂಡು ಭವ್ಯ ಬದಕನ್ನೇ ತೊರೆದು, ಭಿಕ್ಷೆಯ ಬದುಕನ್ನು ಆಯ್ಕೆ ಮಾಡಿಕೊಂಡು, ತನ್ನತನದ ಅರಿವಿಗೆ ಮೆರಗನ್ನು ನೀಡಿದವರು. ಮಾನವನಾದ ಮೇಲೆ ಯಾವದೇ ಲಿಂಗವಾಗಲಿ ಕಾಯಕಕ್ಕೆ ಮತ್ತು ಕಲಾ ಕೌಶಲ್ಯಕ್ಕೆ ಲಿಂಗದ ಹಂಗಿಲ್ಲ. ಎಂದು ಸಾಹಿತಿ ಎ.ಎಸ್. ಮಕಾನದಾರ ಅಭಿಪ್ರಾಯಪಟ್ಟರು.

Advertisement

ಬೆಂಗಳೂರಿನ ಪಯಣ ಸಂಸ್ಥೆಯು ಕರ್ನಾಟಕ ನವಜ್ಯೋತಿ ಸೇವಾ ಸಂಸ್ಥೆ ನಾಗಾವಿ, ನವಜ್ಯೋತಿ ವ್ಯಸನ ಮುಕ್ತಿ ಹಾಗೂ ಪುನರ್ವಸತಿ ಕೇಂದ್ರ ಗದಗ, ನಿರ್ಮಲ ವಿವಿಧೋದ್ದೇಶಗಳ ಸೇವಾ ಸಂಸ್ಥೆ ಮುಂಡರಗಿ ಹಾಗೂ ಕೆ.ವಿ.ಕೆ ಸೇವಾ ಫೌಂಡೇಶನ್ ಗದಗ ಇವುಗಳ ಸಹಯೋಗದಲ್ಲಿ ನವಜ್ಯೋತಿ ವ್ಯಸನ ಮುಕ್ತಿ ಹಾಗೂ ಪುನರ್ವಸತಿ ಕೇಂದ್ರದಲ್ಲಿ `ತಲ್ಕಿ’ ನಾಟಕ ಪ್ರದರ್ಶನ ಹಾಗೂ ಕೆ.ವಿ.ಕೆ ಸೇವಾ ಫೌಂಡೇಶನ್ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಂಗಳಮುಖಿಯರು ಕಡುಕಷ್ಟವನ್ನು ಮೆಟ್ಟಿನಿಂತು ದಿಟ್ಟವಾಗಿ ಸಮಾಜದಲ್ಲಿ ಅಸ್ತಿತ್ವ ಕಂಡುಕೊಂಡಿದ್ದಾರೆ. ನಮಗೆಲ್ಲಾ ಇದ್ದೂ ನೂರಾರು ವ್ಯಸನಕ್ಕೆ ಬಲಿಯಾಗುತಿದ್ದೇವೆ. ಇದರಿಂದ ಅನಾರೋಗ್ಯಯುತ ಸವಜ ನಿರ್ಮಾಣವಾಗಿದೆ. ಸಮಾಜದ ಜಾಗೃತಿಗಾಗಿ ಸಮಾಜದ ಒಳಿತಿಗಾಗಿ ಕೆ.ವಿ.ಕೆ ಸೇವಾ ಫೌಂಡೇಶನ್ ಅನಾವರಣಗೊಂಡಿದೆ. ಸಮಾಜದ ಬೆಳವಣಿಗೆಗೆ ಮತ್ತು ಸಮಾಜದ ಅಂಕು-ಡೊಂಕು ತಿದ್ದುವಲ್ಲಿ ಫೌಂಡೇಶನ್ ಅಧ್ಯಕ್ಷರಾದ ಕಸ್ತೂರಿ ಕಡಗದವರು ಶ್ರಮಿಸಲಿ ಎಂದು ಹಾರೈಸಿದರು.

ಕಾರಾಗೃಹದ ಅಧೀಕ್ಷಕರಾದ ಈರಣ್ಣ ರಂಗಾಪೂರ ಮಾತನಾಡಿ, ಯಾವುದೋ ಒಂದು ವ್ಯಸನಕ್ಕೆ ಬಲಿಯಾಗಿ ಅದೊಂದೇ ನನ್ನ ಜೀವನ, ಇದನ್ನು ಬಿಟ್ಟರೆ ನನಗೆ ಮುಂದೆ ಬದುಕಿಲ್ಲ ಎನ್ನುವ ಭಾವ ತೊರೆದು ಕಾಯಕ ಮಾಡುವವನಿಗೆ ನೂರಾರು ಕೆಲಸಗಳು. ಇದು ಇಲ್ಲದಿದ್ದರೆ ಇನ್ನೊಂದು ಇದೆ ಎಂಬ ಆತ್ಮಸ್ಥೈರ್ಯ ಹೊಂದಬೇಕು. ನೀವು ಸದೃಢ ಸಮಾಜದ ಶಕ್ತಿಯಾಗಿ ಬೆಳೆಯಬೇಕು. ಕೆಟ್ಟ ವ್ಯಸನ ಮರೆತು ಹೊಸ ಬದುಕನ್ನು ಕಟ್ಟಿಕೊಳ್ಳಿ ಎಂದು ವ್ಯಸನಿಗಳಿಗೆ ಕಿವಿಮಾತುಗಳನ್ನು ಹೇಳಿದರು.

ವೇದಿಕೆಯ ಮೇಲೆ ಗಾಯಕಿ ಪಲ್ಲವಿ ಗಜೇಂದ್ರಗಡ, ಸಾಹಿತಿ ಮರುಳಸಿದ್ದಪ್ಪ ದೊಡ್ಡಮನಿ, ಚಂದ್ರು ನಾವಿ, ನಿರ್ಮಲಾ ತರವಾಡೆ, ಕಸ್ತೂರಿ ಕಡಗದ, ಗಣೇಶ ಕಬಾಡಿ, ಹನಮಂತಗೌಡ ಪಾಟೀಲ, ವ್ಯವಸ್ಥಾಪಕರಾದ ಶ್ವೇತಾ ಕೋಳೆಕರ, ಕುಮಾರ ಈಶ್ವರ ಹಟ್ಟಿ, ಚಾಂದಿನಿ, ಸವಿತಾ, ನಿರ್ದೇಶಕ ಶ್ರೀಜಿತ್ ಸುಂದರ, ಮಹಾಲಕ್ಷ್ಮೀ ಉಪಸ್ಥಿತರಿದ್ದರು. ಮಂಗಳಮುಖಿಯರ ಬದುಕನ್ನಾಧರಿಸಿದ ತಲ್ಕಿ ನಾಟಕ ಪ್ರದರ್ಶನ ಜನ ಮನ ಸೆಳೆಯಿತು. ಮಂಗಳಮುಖಿಯರಿಗೆ ವಿಶೇಷ ಗೌರವ ಸಮರ್ಪಿಸಲಾಯಿತು.

ಕೆ.ವಿ.ಕೆ ಫೌಂಡೇಶನ್ ಕಾರ್ಯದರ್ಶಿ ಬಸವರಾಜ ನೆಲಜೇರಿ ನಿರೂಪಿಸಿ ವಂದಿಸಿದರು. ನವಜ್ಯೋತಿ ಸೇವಾ ಸಂಸ್ಥೆಯ ಸರ್ವ ಸಿಬ್ಬಂದಿಗಳು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನವಜ್ಯೋತಿ ಸೇವಾ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಬೇವಿನಮರದ ಮಾತನಾಡಿ, ಬುದ್ಧಿವಂತರ ಬದುಕನ್ನು ಬದಲಾಯಿಸಬಹುದು, ಆದರೆ ಬುದ್ಧಿ ಕೆಟ್ಟವರನ್ನು ಬದಲಾಯಿಸಿ ಅವರನ್ನು ಸಮಾಜದಲ್ಲಿ ತಲೆ ಎತ್ತುವಂತೆ ಮಾಡುವದು ಕಠಿಣ. ಇಂತಹ ಅನುಭವಗಳ ಮೂಲಕ ಸಮಾಜದ ನಿರ್ಗತಿಕರನ್ನು ಸಾಕಿ ಸಲುಹಿ, ಮಕ್ಕಳ ಮರೆತಿರುವ ವೃದ್ಧರ ಅಂತ್ಯ ಸಂಸ್ಕಾರ ಮಾಡಿದ್ದೇವೆ. ಅವರ ಆಶೀರ್ವಾದದ ಫಲವೇ ಸಮಾಜ ಸೇವೆಗೆ ಶಕ್ತಿ. ವ್ಯಸನಿಗಳನ್ನು ಬದಲಾಯಿಸುವದೆಂದರೆ ತಪ್ಪಸ್ಸು ಇದ್ದಂತೆ ಎಂದು ತಮ್ಮ ಶ್ರಮದ ಒಳಹುಗಳನ್ನು ತಿಳಿಸಿದರು.


Spread the love

LEAVE A REPLY

Please enter your comment!
Please enter your name here