KB Ganapathy: ಹಿರಿಯ ಪತ್ರಕರ್ತ ಕೆಬಿ ಗಣಪತಿ ನಿಧನ!

0
Spread the love

ಮೈಸೂರು: ಹಿರಿಯ ಪತ್ರಕರ್ತರಾದ ಕೆ.ಬಿ. ಗಣಪತಿ ಅವರು ಇಂದಿನ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. 88 ವರ್ಷದ ಗಣಪತಿ ಅವರು ತಮ್ಮ ಬದುಕಿನ ಕೊನೆಯ ದಿನದವರೆಗೂ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದರು.

Advertisement

ಕೆ.ಬಿ. ಗಣಪತಿ ಅವರು ತಮ್ಮ ಮಾಲೀಕತ್ವದಲ್ಲಿ ಕನ್ನಡದ ‘ಮೈಸೂರು ಮಿತ್ರ’ ಮತ್ತು ಇಂಗ್ಲೀಷ್ ‘ಸ್ಟಾರ್ ಆಫ್ ಮೈಸೂರು’ ಪತ್ರಿಕೆಗಳನ್ನು ನಡೆಸಿ ಹಳೇ ಮೈಸೂರು ಪ್ರಾಂತ್ಯದಲ್ಲಿ ದೊಡ್ಡ ಓದುಗರ ವರ್ಗವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾದರು. ನೂರಾರು ಪತ್ರಕರ್ತರಿಗೆ ಮಾರ್ಗದರ್ಶನ ನೀಡಿದ ಅವರು ಪತ್ರಕರ್ತರ ಸಮಾಜ ಸೇವೆಯಲ್ಲಿ ಪ್ರಖ್ಯಾತರಾಗಿದ್ದರು.

ಅವರ ‘ಛೂಮಂತ್ರ’ ಹಾಗೂ ‘ಅಬ್ರಕಡಬ್ರ’ ಎಂಬ ಅಂಕಣಗಳು ಜನಪ್ರಿಯವಾಗಿದ್ದವು. ಪತ್ರಿಕೋದ್ಯಮಕ್ಕೆ ಬಂದ ಮುನ್ನ ಅವರು ಬೆಂಗಳೂರಿನಲ್ಲಿ ಕಾನೂನು ಪದವಿ ಪಡೆದಿದ್ದು, ನಂತರ ಮುಂಬೈಯಲ್ಲಿ ಭಾರತೀಯ ವಿದ್ಯಾಭವನದಲ್ಲಿ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವಿ ಗಳಿಸಿದ್ದರು. ಮುಂಬೈಯಲ್ಲಿ ಹಲವಾರು ಪ್ರಸಿದ್ಧ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅವರು 1978ರಲ್ಲಿ ‘ಸ್ಟಾರ್ ಆಫ್ ಮೈಸೂರು’ ಪತ್ರಿಕೆಯನ್ನು, 1980ರಲ್ಲಿ ‘ಮೈಸೂರು ಮಿತ್ರ’ ದಿನಪತ್ರಿಕೆಯನ್ನು ಪ್ರಾರಂಭಿಸಿದರು.

ಕೆ.ಬಿ. ಗಣಪತಿ ಅವರು ‘ಆದರ್ಶವಾದಿ’, ‘ಅಮೆರಿಕ-ಆ್ಯನ್ ಏರಿಯಾ ಆಫ್ ಲೈಟ್’, ‘ದಿ ಕ್ರಾಸ್ ಆ್ಯಂಡ್ ದಿ ಕೂರ್ಗ್’ ಸೇರಿದಂತೆ ಹಲವು ಕಾದಂಬರಿಗಳು ಹಾಗೂ ‘ಸ್ವಾಡ್೯ ಆಫ್ ಶಿವಾಜಿ’ ಜೀವನಚರಿತ್ರೆ ಸೇರಿದಂತೆ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here