ಕಲಬುರಗಿ:- ಕಲಬುರ್ಗಿಯಲ್ಲಿ ನಡೆದಂತಹ KEA ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ಬಂಧಿಸಿದ್ದೂ ಆಯ್ತು ಮಹಾರಾಷ್ಟ್ರದಿಂದ ಕಲಬುರಗಿಗೆ ಕರೆತಂದಿದ್ದೂ ಆಯ್ತು..
Advertisement
ಇದೀಗ ಕಾನೂನು ಪ್ರಕ್ರಿಯೆ ಕೈಗೊಳ್ಳಲು ಅಶೋಕ ನಗರ ಪೋಲೀಸರು ಸಿದ್ಧತೆ ನಡೆಸಿದ್ದಾರೆ. ಇದೆಲ್ಲದರ ಜೊತೆಗೆ ಸ್ಪಾಟ್ ಮಹಜರು ಮತ್ತು ಮೆಡಿಕಲ್ ಚಕಪ್ ಮಾಡಿಸಲು ತಯಾರು ಮಾಡಿಕೊಂಡಿದ್ದಾರೆ. ಹೀಗೆ ಹಂತ ಹಂತವಾಗಿ ಎಲ್ಲವೂ ಅಂದುಕೊಂಡಂತೆ ಆದ್ರೆ ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಬಲೆಗೆ ಬೀಳುವ ಸಾಧ್ಯತೆಗಳಿವೆ..