ಕೆಇಎ ಪರೀಕ್ಷಾ ಅಕ್ರಮ ಪ್ರಕರಣ: ಕಿಂಗ್‌ʼಪಿನ್ ಆರ್‌ʼಡಿ ಪಾಟೀಲ್ ಎಸ್ಕೇಪ್ ದೃಶ್ಯ cctv ಯಲ್ಲಿ ಸೆರೆ

0
Spread the love

ಕಲಬುರಗಿ;- KEA ಪರೀಕ್ಷೆ ಅಕ್ರಮ ಪ್ರಕರಣದ ಪ್ರಮುಖ ಆರೋಪಿ RD ಪಾಟೀಲ್ ಪೋಲೀಸರ ಕೈಗೆ ಸಿಗದೇ ಕಣ್ಣಾಮುಚ್ಚಾಲೆ ಆಟ ಆಡ್ತಿದ್ದಾನೆ.ಅಂದಹಾಗೆ RD ಪಾಟೀಲ್ ಕಂಪೌಂಡ್ ಗೇಟ್ ಜಿಗಿದು ಎಸ್ಕೇಪ್ ಆಗಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಕಲಬುರಗಿ ನಗರದ ಜೇವರ್ಗಿ ಕಾಲನಿಯ ಅಪಾರ್ಟ್‌ಮೆಂಟಿನ ಸಿಸಿಟಿವಿಯಲ್ಲಿ ಎಸ್ಕೇಪ್ ಸೀನ್ ರೆಕಾರ್ಡ್ ಆಗಿದ್ದು ಬೆಳಕಿಗೆ ಬಂದಿದೆ. ಈಗಾಗಲೇ RD ಪಾಟೀಲ್ ಬಂಧನಕ್ಕೆ ವಿಶೇಷ ತಂಡ ರಚನೆಯಾಗಿದೆ.

Advertisement

ಪ್ರಕರಣ ದಾಖಲಾಗಿ 10 ದಿನಗಳೇ ಕಳೆದಿವೆ.ಆದ್ರೂ ಬಂಧನವಾಗಿಲ್ಲ. ಇದೇವೇಳೆ ಭಾನುವಾರ ಮಧ್ಯಾನದಿಂದ ಸೋಮವಾರ ರಾತ್ರಿಯವರೆಗೆ ಅಪಾರ್ಟಮೆಂಟ್ ದಲ್ಲಿ ತಂಗಿದ್ದ ಎನ್ನಲಾಗಿದೆ. ಮಾಹಿತಿ ಪಡೆದ ಪೋಲೀಸರು ಬಂಧಿಸಲು ಹೋದಾಗ ಆರೋಪಿ ಹಿಂದಿನ ಗೇಟ್ ದಿಂದ ಜಿಗಿದು ರೈಟ್ ಹೇಳಿದ್ದಾನೆ.. ಒಟ್ಟಾರೆ ಬಂಧನಕ್ಕಾಗಿ ಪೋಲೀಸರು ಹಾಕಿದ ಲೆಕ್ಕಾಚಾರ ಸದ್ಯಕ್ಕೆ ವಿಫಲ ಆದಂತಾಗಿದೆ ಅನ್ನೋ ಮಾತುಗಳು ಎಲ್ಲೆಡೆ ಕೇಳಿಬರ್ತಿವೆ…


Spread the love

LEAVE A REPLY

Please enter your comment!
Please enter your name here