ಬೆಂಗಳೂರು:- ನಡು ರಸ್ತೆಯಲ್ಲಿಯೇ ಚಾಕು ಹಿಡಿದು ಯುವಕರ ಗುಂಪೊಂದು ಹೊಡೆದಾಟ ನಡೆಸಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ನೀಲಾದ್ರಿ ನಗರದಲ್ಲಿ ಜರುಗಿದೆ.
Advertisement
ಕೇರಳ ಮೂಲದ ಯುವಕರ ಗುಂಪೊಂದು ನಿನ್ನೆ ರಾತ್ರಿ ನಡುರಸ್ತೆಯಲ್ಲೇ ಹೊಡೆದಾಟ ಮಾಡಿಕೊಂಡಿದೆ. ಯುವಕನೋರ್ವನನ್ನು ಕಾಲಿನಿಂದ ತುಳಿದು, ಕೈಗಳಿಂದ ಹಲ್ಲೆ ಮಾಡಿದ್ದಾರೆ. ಈ ಹಲ್ಲೆ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
ಸದ್ಯ ಈ ಗಲಾಟೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಗಲಾಟೆಗೆ ನಿಖರವಾದ ಕಾರಣವೂ ತಿಳಿದು ಬಂದಿಲ್ಲ. ಈ ಹಲ್ಲೆ ದೃಶ್ಯ ನೋಡಿದ ನೆಟ್ಟಿಗರು ತರಾವರಿ ಕಾಮೆಂಟ್ ಮಾಡುತ್ತಿದ್ದು, ಪೊಲೀಸರು ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ.
ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.