HomeKarnataka Newsಟ್ರೆಕ್ಕಿಂಗ್ ಗೆ ಹೋದ ಕೇರಳದ ಮಹಿಳೆ ಮಿಸ್ಸಿಂಗ್: 4ನೇ ದಿನವೂ ಶೋಧ, ಪತ್ತೆಯಾಗದ ಶರಣ್ಯ!

ಟ್ರೆಕ್ಕಿಂಗ್ ಗೆ ಹೋದ ಕೇರಳದ ಮಹಿಳೆ ಮಿಸ್ಸಿಂಗ್: 4ನೇ ದಿನವೂ ಶೋಧ, ಪತ್ತೆಯಾಗದ ಶರಣ್ಯ!

For Dai;y Updates Join Our whatsapp Group

Spread the love

ಮಡಿಕೇರಿ: ಕೊಡಗಿನ ತಡಿಯಂಡಮೋಳ್ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ತೆರಳಿದ ಕೇರಳದ ಮಹಿಳೆ ಶರಣ್ಯ (36) ಇನ್ನೂ ಪತ್ತೆಯಾಗಿಲ್ಲ. ಈ ಪ್ರಕರಣದ ಶೋಧ ಕಾರ್ಯವು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಅರಣ್ಯ ಇಲಾಖೆ, ಪೊಲೀಸ್ ಮತ್ತು ಸ್ಥಳೀಯರು ರಾತ್ರಿಯಿಂದಲೇ ಹುಡುಕಾಟ ನಡೆಸುತ್ತಿದ್ದಾರೆ.

ಮಡಿಕೇರಿ ತಾಲ್ಲೂಕಿನ ಯವಕಪಾಡಿ ಗ್ರಾಮದ ಹೋಂಸ್ಟೇಯಲ್ಲಿ ತಂಗಿದ್ದ ಶರಣ್ಯ ಒಬ್ಬರೇ ಟ್ರೆಕ್ಕಿಂಗ್‌ಗೆ ಹೋಗಿದ್ದರು. ಇತರ ಪ್ರವಾಸಿಗರು ಹಿಂತಿರುಗಿ ಬಂದರೂ ಶರಣ್ಯ ವಾಪಸ್ ಆಗದ ಕಾರಣ ಸ್ಥಳೀಯರು ಅರಣ್ಯ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಶೋಧ ಕಾರ್ಯವನ್ನು ನಾಪೋಕ್ಲು ಎಸ್‌ಐ ರಾಘವೇಂದ್ರ ಅವರ ಮಾರ್ಗದರ್ಶನದಲ್ಲಿ, 2 ಪೊಲೀಸ್ ತಂಡಗಳು ಮತ್ತು 3 ಅರಣ್ಯ ಸಿಬ್ಬಂದಿ ತಂಡಗಳೊಂದಿಗೆ ಗ್ರಾಮಸ್ಥರು ಶೋಧ ನಡೆಸುತ್ತಿದ್ದಾರೆ. ಡ್ರೋನ್ ಹಾಗೂ ಶ್ವಾನದಳ ಸಹ ಕಾರ್ಯಾಚರಣೆಗೆ ಬಳಸಲಾಗುತ್ತಿದೆ.

ಕೇರಳದಲ್ಲಿಯೇ ಉದ್ಯೋಗ ಮಾಡುತ್ತಿದ್ದ ಶರಣ್ಯರ ಕುಟುಂಬಕ್ಕೆ ಈ ಘಟನೆ ಕುರಿತ ಮಾಹಿತಿ ನೀಡಲಾಗಿದೆ. ಶೋಧ ಕಾರ್ಯ ಮುಂದುವರಿದರೂ ಈವರೆಗೆ ಶರಣ್ಯರ ಯಾವುದೇ ಸುಳಿವು ಪತ್ತೆಯಾಗಿಲ್ಲ ಎಂದು ಕೊಡಗು ಎಸ್ಪಿ ಬಿಂದುಮಣಿ ತಿಳಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!