HomeGadag Newsಕೆರಿಮನಿಯವರ ಶೈಕ್ಷಣಿಕ ಕಾಳಜಿ ಅನನ್ಯ

ಕೆರಿಮನಿಯವರ ಶೈಕ್ಷಣಿಕ ಕಾಳಜಿ ಅನನ್ಯ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಕೊಡಮಾಡುವ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿಗೆ ಪಟ್ಟಣದ ಹಿರಿಯ ಮಹಿಳಾ ಸಾಹಿತಿ ಲಲಿತಾ ಸಿ.ಕೆರಿಮನಿ ಭಾಜನರಾದ ಹಿನ್ನೆಲೆಯಲ್ಲಿ ಯುವ ಮುಖಂಡ ಆನಂದಸ್ವಾಮಿ ಗಡ್ಡದೇವರಮಠ ಅವರು ಸನ್ಮಾನಿಸಿ ಗೌರವ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಆನಂದಸ್ವಾಮಿಯವರು ಮಾತನಾಡಿ, ಲಲಿತಕ್ಕ ಕೆರಿಮನಿಯವರು ಮೂರು ದಶಕಗಳಿಗೂ ಅಧಿಕ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಸಾವಿರಾರು ಶಿಷ್ಯರನ್ನು ಈ ನಾಡಿಗೆ ನೀಡಿದ ಕೀರ್ತಿ ಹೊಂದಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸದಾ ಕ್ರಿಯಾಶೀಲರಾಗಿ ಕಾರ್ಯ ಮಾಡಿ ನಿವೃತ್ತಿ ಹೊಂದಿದ್ದರೂ ಸಹ ಶಿಕ್ಷಣದ ಬಗ್ಗೆ ಅವರು ಹೊಂದಿರುವ ಕಾಳಜಿ ಮತ್ತೊಬ್ಬರಿಗೆ ಮಾದರಿಯಾಗುವಂತಿದೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ದಿ. ಪ್ರೊ. ಸಿ.ವಿ. ಕೆರಿಮನಿ ಅವರು ನಮ್ಮ ಭಾಗಕ್ಕೆ ನೀಡಿದ ಅನನ್ಯ ಸೇವೆಯನ್ನು ಲಲಿತಕ್ಕನವರು ಮುಂದುವರೆಸಿಕೊಂಡು ಹೋಗುತ್ತಿದ್ದು, ಅವರಿಗೆ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ದೊರಕಿರುವದು ಸಂತಸದ ವಿಚಾರ ಎಂದರು.

ಪ್ರಶಸ್ತಿ ಪುರಸ್ಕೃತೆ ಲಲಿತಕ್ಕ ಕೆರಿಮನಿ ಮಾತನಾಡಿ, ಯಾವುದೇ ಸಾಧನೆಯಾಗಬೇಕಾದರೆ ಅದಕ್ಕೆ ಶಿಕ್ಷಣ ಬಹು ಮುಖ್ಯ. ಅಂದಿನ ದಿನಮಾನಗಳಲ್ಲಿ ಶಿಕ್ಷಣದ ಬಗ್ಗೆ ಜನರಲ್ಲಿ ಅರಿವು ತುಂಬುವ ಕಾರ್ಯವನ್ನು ಮಾಡಿದ್ದು ಜೊತೆಗೆ ವಯಸ್ಕರ ಶಿಕ್ಷಣದಲ್ಲಿ ನಿತ್ಯ ಪಕ್ಕದ ಹಳ್ಳಿಗಳಿಗೆ ಹೋಗಿ ಅಲ್ಲಿನ ಜನರಿಗೆ ವಿದ್ಯೆ ಕಲಿಸಿ ಅವರು ಅಕ್ಷರ ಕಲಿತು ಸಹಿ ಮಾಡುವಂತಾದಾಗ ಹೆಚ್ಚು ನೆಮ್ಮದಿ ನೀಡಿತ್ತು. ಶಿಕ್ಷಣಕ್ಕೆ ಎಂದೂ ನಿರ್ಲಕ್ಷ್ಯ ಸಲ್ಲ, ಅದು ಎಂದಿದ್ದರೂ ನಮಗೆ ಉತ್ತಮ ಹೆಸರು ತಂದುಕೊಡುತ್ತದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಯಲ್ಲವ್ವ ದುರಗಣ್ಣವರ, ಮಾಜಿ ಅಧ್ಯಕ್ಷರುಗಳಾದ ವಿ.ಜಿ. ಪಡಗೇರಿ, ರಾಜಣ್ಣ ಕುಂಬಿ, ರಮೇಶ ನವಲೆ, ಬಿ.ಎಸ್. ಬಾಳೇಶ್ವರಮಠ, ರಾಮಪ್ಪ ಗಡದವರ, ವಿಜಯ ಕರಡಿ, ನಾರಾಯಣಸಾ ಪವಾರ, ಕಿರಣ ನವಲೆ, ಮಂಜುನಾಥ ಹೊಗೆಸೊಪ್ಪಿನ, ಮಂಜುನಾಥ ಗದಗ ನೀಲಪ್ಪ ಪಡಗೇರಿ, ಶಾಂತು ಓದುನವರ, ಯಲ್ಲಪ್ಪ ಹಂಜಗಿ, ಸೋಮು, ಸೋಮಶೇಖರ ಕೆರಿಮನಿ ಸೇರಿದಂತೆ ಅನೇಕರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!