ಬಾಗಲಕೋಟೆ:- ಕೆರೂರು ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮ ಕಸಾಯಿಖಾನೆ ಮೇಲೆ ದಾಳಿ ಮಾಡಿ 12 ಗೋವುಗಳನ್ನು ರಕ್ಷಣೆ ಮಾಡಿದ್ದಾರೆ.
Advertisement
ಹಜರತ್ ನಿಬಿಸಾಬ್ ಅವರು, ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದ. ಸಾರ್ವಜನಿಕರು ಎಷ್ಟೇ ಹೇಳಿದರೂ ಅಕ್ರಮ ಕಸಾಯಿಖಾನೆ ನಡೆಸುವುದನ್ನು ಬಿಟ್ಟಿರಲಿಲ್ಲ. ಹೀಗಾಗಿ ಹಿಂದೂಪರ ಸಂಘಟನೆ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದರು.
ಇಂದು ಖಚಿತ ಮಾಹಿತಿ ಮೇರೆಗೆ ಕೆರೂರು ಪಿಎಸ್‌ಐ ನೇತೃತ್ವದಲ್ಲಿ ಅಕ್ರಮ ಕಸಾಯಿಖಾನೆಗೆ ದಾಳಿ ಮಾಡಿದ ಪೊಲೀಸರು ಅಲ್ಲಿರುವ ಗೋವುಗಳನ್ನು ರಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕೆರೂರು ಸಂತೆಯಲ್ಲಿ ಗೋವುಗಳನ್ನ ಖರೀದಿಸುತ್ತಿದ್ದ ಹಜರತ್ ನಬಿಸಾಬ್ ಅವರು, ನಂತರ ಅವುಗಳನ್ನು ಕತ್ತರಿಸಿ ಮಾಂಸಗಳನ್ನು ಬೇರೆಡೆಗೆ ಸಾಗಾಟ ಮಾಡುತ್ತಿದ್ದ. ಪೊಲೀಸರು ದಾಳಿ ನಡೆಸಿದ ವೇಳೆ ಕಸಾಯಿಖಾನೆಯಲ್ಲಿ 7 ಹಸು, 4 ಕರು ಸೇರಿದಂತೆ 12 ಹಸುಗಳು ಇರುವುದು ಬೆಳಕಿಗೆ ಬಂದಿದೆ.