ಹೈದರಾಬಾದ್: ಕೆಜಿಎಫ್ ಚಾಪ್ಟರ್ 2 ಸಹ-ನಿರ್ದೇಶಕ ಕೀರ್ತನ್ ನಾಡಗೌಡ ಅವರ ನಾಲ್ಕು ವರ್ಷದ ಪುತ್ರ ಚಿರಂಜೀವಿ ಸೋನಾರ್ಷ್ ಕೆ. ನಾಡಗೌಡ ಸೋಮವಾರ ಲಿಫ್ಟ್‌ನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಈ ದಾರುಣ ಘಟನೆ ಕುಟುಂಬದಲ್ಲಿ ಭಾರೀ ಶೋಕನ್ನು ಮೂಡಿಸಿದೆ.
ಕೀರ್ತನ್ ನಾಡಗೌಡ ಮತ್ತು ಪತ್ನಿ ಸಮೃದ್ಧಿ ಪಟೇಲ್ ತಮ್ಮ ಮಗುವನ್ನು ಕಳೆದುಕೊಂಡಿದ್ದು, ಇದೀಗ ಎಲ್ಲರು ಕುಟುಂಬದ ದುಃಖವನ್ನು ಹಂಚಿಕೊಂಡಿದ್ದಾರೆ. ಚಲನಚಿತ್ರ ಹಾಗೂ ರಾಜಕೀಯ ವಿಶ್ವದ ಅನೇಕ ಗಣ್ಯರು ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ “ಕೀರ್ತನ್ ನಾಡಗೌಡ ಅವರ ಮಗನ ಅಕಾಲಿಕ ಮರಣ ತೀವ್ರ ದುಃಖ ತಂದಿದೆ. ಈ ದುಃಖವನ್ನು ಕುಟುಂಬ ತಾಳಲು ಭಗವಂತ ಶಕ್ತಿ ನೀಡಲಿ” ಎಂದು ಸಂದೇಶ ನೀಡಿದ್ದಾರೆ.
ಕೀರ್ತನ್ ನಾಡಗೌಡ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಅನೇಕ ಸಿನಿಮಾಗಳಿಗೆ ನಿರ್ದೇಶನ ಸಹಾಯ ಮಾಡಿದ್ದಾರೆ. ಪ್ಯಾನ್ ಇಂಡಿಯಾ ದಾಖಲೆ ಬರೆದ ಕೆಜಿಎಫ್ ಚಿತ್ರದಲ್ಲಿ ಸಹ-ನಿರ್ದೇಶಕರಾಗಿ ತಮ್ಮ ಕೌಶಲ್ಯವನ್ನು ತೋರಿದ್ದರು. ಇದೀಗ ಅವರು ನಿರ್ದೇಶಕರಾಗಿ ಡೆಬ್ಯೂ ಮಾಡಲು ಸಿದ್ದವಾಗಿದ್ದು, ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಲ್ಲಿ ಪ್ರಶಾಂತ್ ನೀಲ್ ಅವರೊಂದಿಗೆ ಹಾರರ್ ಚಿತ್ರವೊಂದನ್ನ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ನಡೆಯುತ್ತಿದೆ. ಈ ಖುಷಿಯ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಇದೀಗ ದುಃಖದ ವಾತಾವರಣ ನಿರ್ಮಾಣವಾಗಿದೆ.



