ರಾಯಚೂರು:-ರಾಡ್ ನಿಂದ ಬಾಗಿಲು ಮುರಿದು ಕಾಂಗ್ರೆಸ್ ಶಾಸಕನ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಜರುಗಿದೆ.
Advertisement
ಜಿಲ್ಲೆಯ ಸಿಂಧನೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಹಂಪನಗೌಡ ಬಾದರ್ಲಿ ಗೆಸ್ಟ್ ಹೌಸ್ ನಲ್ಲಿ ಕಳ್ಳರು ಕಳ್ಳತನಕ್ಕೆ ಯತ್ನಿಸಿ ಏನು ಸಿಗದೇ ಬರಿಗೈಲಿ ವಾಪಸ್ ಆಗಿದ್ದಾರೆ.
ಶಾಸಕರ ಗೆಸ್ಟ್ ಹೌಸ್ ನಲ್ಲಿ ಏನು ಸಿಗದ ಹಿನ್ನೆಲೆ ಬರಿಗೈಲಿ ಕಳ್ಳರು ವಾಪಸ್ ಹೋಗಿದ್ದಾರೆ. ರಾಯಚೂರು ನಗರದ ಹೊರ ಭಾಗದ ಕೃಷ್ಣ ಮೆಡೋಸ್ ನಲ್ಲಿರೊ ನಿವಾಸದಲ್ಲಿ ಕೃತ್ಯ ನಡೆದಿದೆ. ರಾಯಚೂರು ನಗರದ ಗೆಸ್ಟ್ ಹೌಸ್ ಗೆ ಆಗಾಗ ಶಾಸಕ ಹಂಪನಗೌಡ ಬಾದರ್ಲಿ ಬರ್ತಿದ್ದರು. ಇದೇ ಸೋಮವಾರ ತಡರಾತ್ರಿ ಶಾಸಕರ ಗೆಸ್ಟ್ ಹೌಸ್ ನಲ್ಲಿ ಕಳ್ಳತನಕ್ಕೆ ಯತ್ನಿಸಲಾಗಿದೆ. ರಾಡ್ ನಿಂದ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಲಾಗಿದ್ದು, ಮನೆಯಲ್ಲಿ ಏನು ಸಿಗದ ಹಿನ್ನೆಲೆ ಬರಿಗೈಲಿ ಕಳ್ಳರು ವಾಪಸ್ ಹೋಗಿದ್ದಾರೆ.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.