ಬಳ್ಳಾರಿ:– ಪೊಲೀಸ್ ಸಿಬ್ಬಂದಿಯ ಸುಪರ್ದಿಯಲ್ಲಿ ಖದೀಮರು ಕಳ್ಳತನ ಮಾಡಿ ಸಿಕ್ಕಿಬಿದ್ದಿರುವ ಘಟನೆ ನಗರದ ಗಂಗಪ್ಪ ಜಿನ್ ಬಳಿ ನಡೆದಿದೆ.
ಕಳ್ಳರು, ಪ್ರೀ ಪ್ಲಾನ್ ಮೂಲಕ ಹಣ ಎಗರಿಸಲು ಹೊಂಚು ಹಾಕಿದ್ದರು ಎನ್ನಲಾಗಿದೆ. ತಮ್ಮನ ಜೊತೆ ಬಂಗಾರದ ವ್ಯಾಪಾರಿ ರಘು ಹಣ ಕೊಂಡ್ಯೊಯುತ್ತಿರುವ ಸಂದರ್ಭದಲ್ಲಿ ಖದೀಮರು ಹೊಂಚು ಹಾಕಿ ಕೃತ್ಯ ಎಸಗಿದ್ದಾರೆ. ಅಣ್ತಮ್ಮಂದಿರು ನಗರದ ಗಂಗಪ್ಪ ಜಿನ್ ಬಳಿ ಬೈಕ್ ಮೇಲೆ ಹಣ ತೆಗೆದುಕೊಂಡ ಹೋಗುತ್ತಿದ್ದರು. ಈ ವೇಳೆ ಆರೋಪಿಗಳು ಬಂದು ಅವರಿಗೆ ಕಾರದಪುಡಿ ಎರಚಿ ಹಣ ಎಸ್ಕೇಪ್ ಮಾಡಿದ್ದಾರೆ. ಆರೋಪಿಯ ಜೊತೆಗೆ ಪೊಲೀಸ್ ಸಿಬ್ಬಂದಿ ಕೈಜೊಡಿಸಿದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ.
ಆರೋಪಿಗಳು, ನಗದು ಹಣ 22,99,000 ಹಣ ಮತ್ತು 318 ಗ್ರಾಂ ತೂಕದ ಬಂಗಾರದ ಗಟ್ಟಿ ಸೇರಿ ಒಟ್ಟು 38,89,000 ಬೆಲೆಯ ಬ್ಯಾಗ್ ಎಸ್ಕೇಪ್ ಮಾಡಿದ್ದಾರೆ. ಕಳ್ಳರಿಗೆ ಹೆಡ್ ಕಾನ್ಸ್‌ಟೇಬಲ್ ಮೆಹಬೂಬ್ ಅವರು ಕೂಡ ಸಾಥ್ ಕೊಟ್ಟಿದ್ದು, ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
ತೌಸೀಫ್, ಜಾವೀದ್, ಪೀರ, ದಾದಾ ಖಲಂದರ್, ಮುಸ್ತಾಕ್ ಅಲಿ, ಮಿಂಗಲ್ ಬಂಧಿತರು. ಕಾರ್ಯದಲ್ಲಿ ಪೋಲೀಸಪ್ಪನಿಗೆ 9 ಲಕ್ಷ ಹಣ ಹಂಚಿಕೆ ಮಾಡಲಾಗಿದೆ. ಕಳ್ಳರ ಜೊತೆ ಕೈ ಜೋಡಿಸಿದ್ದನ್ನು ಒಪ್ಪಿಕೊಂಡ ಹಿನ್ನೆಲೆ, ಹೆಡ್ ಕಾನ್ಸ್‌ಟೇಬಲ್ ಮೆಹಬೂಬ್ ರನ್ನು ಸಸ್ಪೆಂಡ್ ಮಾಡಿ ಎಸ್ಪಿ ಶೋಭಾ ರಾಣಿ ಆದೇಶ ಹೊರಡಿಸಿದ್ದಾರೆ.