ಮೈಸೂರು: ಸಾವಿನ ಮನೆಯನ್ನೂ ಬಿಡದ ಖದೀಮರು ಮನೆಯಲ್ಲಿದ್ದ 1.34 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸೇರಿ 1 ಲಕ್ಷ ನಗದನ್ನು ಕಳ್ಳರು ದೋಚಿದ ಘಟನೆ ನಡೆದಿದೆ.
Advertisement
ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಎಂ.ಶ್ರೀ ನಗರದಲ್ಲಿ ನಡೆದಿದೆ. ಬನ್ನೂರಿನಲ್ಲಿ ವಾಸವಿದ್ದ ಕಂಟ್ರಾಕ್ಟರ್ ಬಸವರಾಜು ಎಂಬುವವರ ತಾಯಿ ಮೃತಪಟ್ಟಿದ್ದರು. ಅದರಂತೆ ತಾಯಿಯ ಅಂತಿಮ ದರ್ಶನ ಪಡೆದು ಅಂತ್ಯ ಸಂಸ್ಕಾರಕ್ಕಾಗಿ ಬಸವರಾಜ್ ಕುಟುಂಬ ಸಮೇತ ತೆರಳಿದ್ದರು. ಈ ವೇಳೆ ಮನೆ ಬಾಗಿಲ ಬೀಗ ಮುರಿದು ಚಿನ್ನಾಭರಣ, ನಗದು ಎಗರಿಸಿದ್ದಾರೆ.
ಈ ಕುರಿತು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.