ಹಾಡಹಗಲೇ ಹತ್ತು ಲಕ್ಷ ಕನ್ನ ಹಾಕಿದ ಖದೀಮ.! ಕಳ್ಳನ‌ ಕೈಚಳಕ CCTVಯಲ್ಲಿ ಸೆರೆ

0
Spread the love

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಬಟ್ಟೆಯ ಮೇಲೆ ಚಾಕಲೇಟ್ ಅಂಟಿಸಿ ಗಮನ ಬೇರೆಡೆಗೆ ಸೆಳೆದು ಹಾಡಹಗಲೇ ಬ್ಯಾಗ್​ನಲ್ಲಿ 10 ಲಕ್ಷ ರೂ. ಕಳ್ಳತನ ಮಾಡಿರುವಂತಹ ಘಟನೆ  ತಡವಾಗಿ ಬೆಳಕಿಗೆ ಬಂದಿದೆ  . ನಾಲ್ವರು ಖದೀಮರಿಂದ ಕೃತ್ಯವೆಸಗಲಾಗಿದ್ದು, ಕಳ್ಳರ ಕೈಚಳಕ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಹೌದು ಬೆಂಗಳೂರು ಹೊರವಲಯದ  ಆನೇಕಲ್ ತಾಲೂಕಿನ ಚಂದಾಪುರ ಸಾಯಿ ಮೆಡಿಕಲ್ ನಲ್ಲಿ   ಮೆಡಿಕಲ್ಗೆ ಬಂದಾಗ ಬಟ್ಟೆಯ ಮೇಲೆ ಚಾಕಲೇಟ್ ಅಂಟಿಸಿ ಗಮನ ಬೇರೆಡೆಗೆ ಸೆಳೆದು ಹಾಡಹಗಲೇ ಬ್ಯಾಗ್​ನಲ್ಲಿ 10 ಲಕ್ಷ ರೂ. ಕಳ್ಳತನ ಎಸಗಿದ್ದಾರೆ.. ಇನ್ನು ಎರಡು ಬೈಕ್​ಗಳಲ್ಲಿ ಬಂದಿದ್ದ ನಾಲ್ವರು ಖದೀಮರಿಂದ ಕೃತ್ಯವೆಸಗಲಾಗಿದ್ದು, ಕಳ್ಳರ ಕೈಚಳಕ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ಚಂದಾಪುರದ ಸಾಯಿ ಮೆಡಿಕಲ್ ಮಾಲೀಕ ಮಾದವ ರೆಡ್ಡಿ ಎನ್ನುವವರು ಬ್ಯಾಂಕಿನಿಂದ 10 ಲಕ್ಷ ರೂ. ಹಣ ಡ್ರಾ ಮಾಡಿಕೊಂಡು ಬಂದಿದ್ದರು. ಬ್ಯಾಗ್​​ನಲ್ಲಿದ್ದ ಹಣವನ್ನ ಸಹೋದರನಿಗೆ ನೀಡುವಂತೆ ಮಾದವ ರೆಡ್ಡಿ ಚಾಲಕ ಮಂಜುನಾಥ್​ಗೆ ಹೇಳಿ ಹೋಗಿದ್ದಾರೆ. ಮೆಡಿಕಲ್ ಅಂಗಡಿ ಮುಂದೆ ಚಾಲಕ ಹಣದ ಬ್ಯಾಗ್ ಹಿಡಿದು ನಿಂತಿದ್ದಾರೆ. ಈ ವೇಳೆ ಹೊಂಚು ಹಾಕಿ ಕುಳಿತಿದ್ದ ಖದೀಮರು, ಬಟ್ಟೆಯ ಮೇಲೆ ಚಾಕಲೇಟ್ ಅಂಟಿಸಿ ಶರ್ಟ್ ಗಲೀಜಾಗಿದೆ ಎಂದು ಗಮನ ಬೇರೆಡೆ ಸೆಳೆದು ಕ್ಷಣಾರ್ಧದಲ್ಲಿ ಹಣವಿದ್ದ ಬ್ಯಾಗ್ ಕದ್ದು ಕಳ್ಳರು ಪರಾರಿಯಾಗಿದ್ದಾರೆ..


Spread the love

LEAVE A REPLY

Please enter your comment!
Please enter your name here