ಬೆಂಗಳೂರು:- ಚಾಮರಾಜಪೇಟೆಯ ರುದ್ರಪ್ಪ ಗಾರ್ಡನ್ ಬಳಿಯ ಜ್ಯುವೆಲರಿ ಶಾಪ್‌ನಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ.
100 ರೂಪಾಯಿ ಬೆಳ್ಳಿ ಖರೀದಿಸಿ 2.28 ಲಕ್ಷ ಮೌಲ್ಯದ ಚಿನ್ನ ಕದ್ದು ಖದೀಮರು ಎಸ್ಕೇಪ್ ಆಗಿದ್ದು, CCTVಯಲ್ಲಿ ಕಳ್ಳರ ಕರಾಮತ್ತು ಸೆರೆಯಾಗಿದೆ.
ಜುಲೈ 14ರಂದು ಜ್ಯುವೆಲರಿ ಶಾಪ್ ಗೆ ಇಬ್ಬರು ವ್ಯಕ್ತಿಗಳು ಬಂದಿದ್ದಾರೆ. ಮೊದಲು ನೂರು ರೂಪಾಯಿ ಮೌಲ್ಯದ ಬೆಳ್ಳಿಯ ವಸ್ತು ಖರೀದಿ ಮಾಡ್ತಾರೆ. ಬಳಿಕ 500 ರೂಪಾಯಿ ನೋಟು ನೀಡಿ ಚೇಂಜ್ ನೀಡುವಂತೆ ಮಾಲೀಕರ ಬಳಿ ಕೇಳ್ತಾರೆ. ಚೇಂಜ್ ಕೊಡುವಾಗ ಮಾಲೀಕನಿಗೆ ಗೊತ್ತಾಗದಂತೆ 2.28 ಲಕ್ಷ ಮೌಲ್ಯದ 28 ಗ್ರಾಂ ಚಿನ್ನ ಕದ್ದು ಖದೀಮರು ಹೋಗಿದ್ದಾರೆ.
ಆರೋಪಿಗಳು ಹೋದ ಕೆಲ ನಿಮಿಷಗಳ ಬಳಿಕ ಚಿನ್ನಾಭರಣ ಮಿಸ್ ಆಗಿರೋದು ಗೊತ್ತಾಗಿದೆ. ಕೂಡಲೇ CCTV ಪರಿಶೀಲನೆ ಮಾಡಿದಾಗ ಕಳ್ಳರ ಕೈಚಳಕ ಗೊತ್ತಾಗಿದೆ. ಘಟನೆ ಸಂಬಂಧ ಜ್ಯುವೆಲರಿ ಮಾಲೀಕ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನ ಅನ್ವಯ ಎಫ್.ಐ.ಆರ್ ದಾಖಲಾಗಿದೆ.
ಅದರ ಅನ್ವಯ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.