ಕಲಬುರಗಿ: ಮಲ್ಲಿಕಾರ್ಜುನ ಖರ್ಗೆ ತಮ್ಮ ಮಗನನ್ನು ಸಿಎಂ ಮಾಡಲು ಅವರೇ ಸರ್ಕಾರವನ್ನ ಬೀಳಿಸುತ್ತಾರೆ ಎಂದು ಮಾಜಿ ಸಚಿವ ಶ್ರೀರಾಮುಲು ಹೊಸ ಬಾಂಬ್ ಸಿಡಿಸಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು,
Advertisement
ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಈಗಾಗಲೇ ಸಿಎಂ ಗಾದಿಗೆ ಫೈಟ್ ಮಾಡುತ್ತಿದ್ದಾರೆ. ಇದರ ನಡುವೆಯೇ ಮೂರನೇ ವ್ಯಕ್ತಿ ಪ್ರವೇಶ ಮಾಡುತ್ತಾರೆ. ಮಲ್ಲಿಕಾರ್ಜುನ ಖರ್ಗೆ ತಮ್ಮ ಮಗನನ್ನು ಸಿಎಂ ಮಾಡಲು ಅವರೇ ಸರ್ಕಾರವನ್ನ ಬೀಳಿಸುತ್ತಾರೆ ಎಂದು ಹೇಳಿದ್ದಾರೆ.
ಮೊನ್ನೆ ಖರ್ಗೆ ಅವರು ಸರ್ಕಾರ ಬೀಳುವ ಬಗ್ಗೆ ಮಾತನಾಡಿದ್ದಾರೆ. ಮೋದಿಯವರು ಈ ಸರ್ಕಾರ ಬಿಳಿಸುತ್ತಾರೆ ಎಂದು ಹೇಳಿದ್ದಾರೆ. ಮೋದಿಯವರಿಗೆ ಏನು ಕರ್ಮ ಈ ಸರ್ಕಾರ ಬಿಳಿಸೋಕೆ. ಇಬ್ಬರ ಕಾದಾಟದಲ್ಲಿ ತಮ್ಮ ಮಗನನ್ನ ಸಿಎಂ ಮಾಡಲು ಖರ್ಗೆಯವರೇ ಪ್ಲ್ಯಾನ್ ಮಾಡಿದ್ದಾರೆ ಎಂದು ಗುಡುಗಿದ್ದಾರೆ.