ಬೆಂಗಳೂರು: ಕದ್ದ ಚಿನ್ನವನ್ನು ವಾಟ್ಸಪ್ ಡಿಪಿಯಲ್ಲಿ ಹಾಕಿ ಸಿಕ್ಕಿಬಿದ್ದ ಖತರ್ನಾಕ್ ಕಳ್ಳಿ..!

0
Spread the love

ಬೆಂಗಳೂರು: ಚಿನ್ನದ ಆಸೆಗೆ ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿ ಕದ್ದ ಚಿನ್ನವನ್ನ ವಾಟ್ಸಾಪ್ ಡಿಪಿ ಹಾಕಿ ಖತರ್ನಾಕ್ ಕಳ್ಳಿ ಸಿಕ್ಕಿಬಿದ್ದಿದ್ದಾಳೆ. ಹೌದು  ಕೆಲಸ ಕೊಟ್ಟ ಮನೆ ಮಾಲೀಕರ ಮನೆಗೇ ಕನ್ನ ಹಾಕುತ್ತಿದ್ದ ಖತರ್ನಾಕ್ ಕಳ್ಳಿ. ಹೊಸಪೇಟೆ ಮೂಲದ ರೇಣುಕಾ (38) ಬಂಧಿತ ಆರೋಪಿಯಾಗಿದ್ದು, ಮಾರತ್ತಹಳ್ಳಿ ಪೂರ್ವ ಪೌಂಟೇನ್ ಅಪಾರ್ಟ್‌ಮೆಂಟ್‌ನ ಎರಡು ಪ್ಲಾಟ್‌ಗಳಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ ರೇಣುಕಾ.

Advertisement

ಎರಡೂ ಮನೆಗಳಲ್ಲೂ ಬರೋಬ್ಬರಿ 100 ಗ್ರಾಮ್ ಚಿನ್ನ ಕದ್ದು ಕೈಚಳಕ ತೋರಿಸಿದ್ದ ರೇಣುಕಾ. ಮನೆ ಮಾಲೀಕೆಯ ತಾಳಿಯನ್ನು ಬಿಡದೇ ಕದ್ದು ಬಳಿಕ ತನಗೇನೂ ಗೊತ್ತಿಲ್ಲ ಅಂತಾ ನಾಟಕವಾಡಿದ್ದಳು. ಈ ಬಗ್ಗೆ ಮಾಲೀಕರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಬಳಿಕ ಪೊಲೀಸರು ರೇಣುಕಾಳನ್ನು ಕರೆಸಿ ವಿಚಾರಣೆ ನಡೆಸಿದ್ದರು. ಪೊಲೀಸರ ಮುಂದೆ ಅಮಾಯಕಳಂತೆ ನಟಿಸಿದ್ದ ಕಳ್ಳಿ. ಪಾಪದ ಹೆಣ್ಣು ಅಂದುಕೊಂಡು ಪೊಲೀಸರು ಬಿಟ್ಟು ಕಳಿಸಿದ್ದರು.

ಬಳಿಕ ಪೊಲೀಸರು ಏನೂ ಮಾಡೋದಿಲ್ಲ ಅಂತಾ ಗೊತ್ತಾಗಿ ಕದ್ದ ನೆಕ್ಲೆಸ್ ಧರಿಸಿ ಫೋಟೊ ತೆಗೆಸಿಕೊಂಡಿದ್ದ ರೇಣುಕಾ ಆ ಫೋಟೊವನ್ನು ತನ್ನ ವಾಟ್ಸಪ್ ಡಿಪಿ ಹಾಕಿ ತಗಲಾಕ್ಕೊಂಡ ಕಳ್ಳಿ. ಮೊದಲೇ ರೇಣುಕಾ ನಂಬರ್ ಪೊಲೀಸರು, ಮನೆ ಮಾಲೀಕರ ಮೊಬೈಲ್‌ನಲ್ಲಿ ಸೇವ್ ಆಗಿದ್ದರಿಂದ ವಾಟ್ಸಪ್ ಡಿಪಿಯಲ್ಲಿ ರೇಣುಕಾ ಕೊರಳಲ್ಲಿ ನೆಕ್ಲೆಸ್ ಇರೋ ಫೋಟೊ ನೋಡಿದ್ದಾರೆ. ಚಿನ್ನ ಕದ್ದ ಕಳ್ಳಿ ಇವಳೆ ಎಂಬುದು ಗೊತ್ತಾಗಿದೆ. ಬಳಿಕ ರೇಣುಕಾಳನ್ನು ಬಂಧಿಸಿದ ಪೊಲೀಸರು. ಬಂಧನ ಬಳಿಕ ತಪ್ಪೊಪ್ಪಿಕೊಂಡ ಕಳ್ಳಿ. ಸದ್ಯ ಬಂಧಿತಳಿಂದ 80 ಗ್ರಾಮ್ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here