ಬೆಂಗಳೂರು: ಬಸ್ ಗಳಲ್ಲಿ ಚಿನ್ನಾಭರಣ ಕಳ್ಳತನ ಮಾಡ್ತಿದ್ದ ಖತರ್ನಾಕ್ ಕಳ್ಳಿಯರನ್ನು ಕೆ ಆರ್ ಪುರಂ ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಮೂಲದ ಲಾವಣ್ಣ ಮತ್ತು ಮೀನಾ ಬಂಧಿತ ಮಹಿಳೆಯರಾಗಿದ್ದು, ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಕರಂತೆ ಪ್ರಯಾಣ ಮಾಡ್ತಿದ್ದ ಆರೋಪಿತೆಯರು.. ಬಸ್ ನಲ್ಲಿ ಚಿನ್ನಾಭರಣ ಇದ್ದ ಮಹಿಳೆಯರನ್ನ ಗಮನಿಸ್ತಿದ್ರು. ನಂತರ ಅವ್ರನ್ನ ಪರಿಚಯ ಮಾಡ್ಕೊಂಡು ಗಮನ ಬೇರೆ ಕಡೆ ಸೆಳೆದು ಚಿನ್ನಾಭರಣ ಕದೀತ್ತಿದ್ರು.
ಒಮ್ಮೊಮ್ಮೆ ರಷ್ ಇರೋ ಬಸ್ ಹತ್ತಿ ತಳ್ಳಾಟ ನೂಕಾಟ ಮಾಡಿ ಜಗಳದ ಮಧ್ಯ ಚಿನ್ನಾಭರಣ ಕಿತ್ತುಕೊಳ್ತಿದ್ರು.. ಕರ್ನಾಟಕ ಆಂಧ್ರ ಸೇರೆ ಹಲವಡೆ ಕೃತ್ಯ ಎಸಗುತ್ತಿದ್ದರು. ಹಲವು ವರ್ಷಗಳಿಂದ ಕದೀತ್ತಿದ್ರೂ ಒಂದು ಬಾರಿಯೂ ಸಿಕ್ಕಿರಲಿಲ್ಲ. ಆರೋಪಿತೆಯರ ಜಾಡು ಹಿಡಿದು ಕೆ ಆರ್ ಪುರಂ ಪೊಲೀಸರು ಆರೋಪಿತೆಯರನ್ನ ಬಂಧಿಸಿ ಒಂದು ಕೆಜಿ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಘಟನೆ ಸಂಬಂಧ ಕೆ ಆರ್ ಪುರಂ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.