ದಾವಣಗೆರೆ: ಚನ್ನಗಿರಿ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ 30ಕ್ಕೂ ಅಧಿಕ ಕಳ್ಳತನ ಪ್ರಕರಣದಲ್ಲಿದ್ದ ಖತರ್ನಾಕ್ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚನ್ನಗಿರಿ ಟೌನ್ ವಡ್ನಾಳ್ ರಾಜಣ್ಣ ಬಡಾವಣೆ ಅಫ್ರೋಜ್‍ಅಹಮ್ಮದ್ (42) ಬಂಧಿತ ಆರೋಪಿಯಾಗಿದ್ದು, ಆರೋಪಿತನಿಂದ 45 ಲಕ್ಷದ 38 ಸಾವಿರ ಮೌಲ್ಯದ ಆಭರಣಗಳು ವಶಕ್ಕೆ ಪಡೆದಿದ್ದಾರೆ.
ಸುಮಾರು ಮೂರು ವರ್ಷಗಳಿಂದಚನ್ನಗಿರಿ, ಹೊನ್ನಾಳಿ, ಹರಿಹರ, ಭದ್ರಾವತಿ, ಹೊಳಲ್ಕೆರೆ, ದಾವಣಗೆರೆ, ಹರಪನಹಳ್ಳಿ, ಹೊಸದುರ್ಗ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ತಲೆ ಮರೆಸಿಕೊಂಡಿದ್ದನು.
ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ಆರೋಪಿ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ್ದರು. ಚನ್ನಗಿರಿ ಠಾಣೆಯ 03,ಸಂತೇಬೆನ್ನೂರು ಠಾಣೆಯ 01 ತರೀಕೆರೆ ಠಾಣೆಯ 03, ಲಕ್ಕವಳ್ಳಿ ಠಾಣೆಯ 04 ಭದ್ರಾವತಿ ಪೇಪರ್‍ಟೌನ್ ಠಾಣೆಯ 01, ಹಾಗೂ ಅಜ್ಜಂಪುರ ಠಾಣೆಯ 01 ಪ್ರಕರಣ ಸೇರಿದಂತೆ ಒಟ್ಟು 13 ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ.
ಒಂಟಿ ಮನೆ ಗುರುತಿಸಿ ಒಂಟಿ ಸಲಗದಂತ ಬೀಗ್ ಹೊಡೆದು ಕಳ್ಳತನ ಮಾಡುತ್ತಿದ್ದ ಆರೋಪಿ ಪ್ರೇಯಸಿ ಚನ್ನಗಿರಿಯ ಭಾಗ್ಯ, ಸ್ನೇಹಿತ ಅಜ್ಜಿಹಳ್ಳಿ ಗ್ರಾಮದ ಪ್ರವೀಣ ಕಡೆಯಿಂದ ಮಾರಾಟ ಮಾಡಿಸುತ್ತಿದ್ದನು.
ಆರೋಪಿತನಿಂದ 44,38,000/ರೂ ಮೌಲ್ಯದ 634 ಗ್ರಾಂ ಬಂಗಾರದ ಆಭರಣಗಳು, ಸುಮಾರು 40,000/ ರೂ ಮೌಲ್ಯದ 550 ಗ್ರಾಂ ಬೆಳ್ಳಿಯ ಆಭರಣಗಳು, ಕೃತ್ಯಕ್ಕೆ ಬಳಸಿದ 60,000/ರೂ ಮೌಲ್ಯದ ಕೆಎ-17 ಇವಿ-5083 ನಂ ಬೈಕ್ 2ಕಬ್ಬಿಣದ ರಾಡ ವಶಕ್ಕೆ ಪಡೆದು ಬಂದಿತ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಇನ್ನೂ ಆರೋಪಿಯನ್ನು ಖೆಡ್ಡಾಕ್ಕೆ ಕೆಡವಿದ ಪೊಲೀಸ್ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.